Telegram Join My Telegram WhatsApp Join My WhatsApp

ಕರ್ನಾಟಕ ಬಜೆಟ್ 2026–27 : ಆಯವ್ಯಯದ ಮುಖ್ಯಾಂಶಗಳು

ಕರ್ನಾಟಕ ಬಜೆಟ್ 2026–27 : ಆಯವ್ಯಯದ ಮುಖ್ಯಾಂಶಗಳು

  • ರಾಜ್ಯದಲ್ಲಿ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ 56,432 ಹುದ್ದೆಗಳ ಭರ್ತಿ ಮಾಡುವ ಪ್ರಕ್ರಿಯೆಗೆ ಚಾಲನೆ.
  • ರಾಜ್ಯದ ರಸ್ತೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗಾಗಿ 4,000 ಕೋಟಿ ರೂ. ವೆಚ್ಚದಲ್ಲಿ ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಎರಡನೇ ಹಂತದ ಕಾರ್ಯಕ್ರಮ.
  • ರೈತರ ನೆರವಿನ ನಾಲ್ಕು ಆಧಾರ ಸ್ತಂಭಗಳು ಅಂದರೆ ವೈಜ್ಞಾನಿಕ ಕೃಷಿ ಮಾರ್ಗದರ್ಶನ, ಹಣಕಾಸು ನೆರವು. ಉತ್ತಮ ಗುಣಮಟ್ಟದ ಕೃಷಿ ಪರಿಕರಗಳು ಮತ್ತು ಬೆಳೆ ನಿರ್ವಹಣೆ ಹಾಗೂ ಕೊಲ್ಲೋತ್ತರ ಸಂಗ್ರಹಣಾ ವಿಸ್ತರಣೆ.
  • ಕೃಷಿ ಬೆಳೆಗಳ ಮೌಲ್ಯವರ್ಧನೆ ಹಾಗೂ ಕೃಷಿ ತ್ಯಾಜ್ಯ ಮರುಬಳಕೆ ಉತ್ತೇಜಿಸಲು ‘ಮುಖ್ಯಮಂತ್ರಿ ಕೃಷಿ ವಿಸ್ತಾರ’ ಯೋಜನೆ ಜಾರಿಗೆ 100 ಕೋಟಿ ರೂ. : ಪರಿಸರ ಸ್ನೇಹಿ ಮತ್ತು ಸುಸ್ಥಿರ ಕೃಷಿ ಪದ್ಧತಿಗಳನ್ನು ಉತ್ತೇಜಿಸಲು ‘ವಸುಧಾಮೃತ’ ಕಾರ್ಯಕ್ರಮ: ಬೆಳೆಗಳಲ್ಲಿ ಕೀಟ ಹಾಗೂ ರೋಗಗಳ ನಿಯಂತ್ರಣಕ್ಕೆ ‘ಸಸ್ಯ ಸಂಜೀವಿನಿ’ ಯೋಜನೆ. ಕೋಲಾರ ಜಿಲ್ಲೆಯ MSIL ವತಿಯಿಂದ ರೈತ ಮಾಲ್‌ಗಳ ಸ್ಥಾಪನೆ: ತೋಟಗಾರಿಕೆ ಉತ್ಪನ್ನಗಳಿಗಾಗಿ 64 ಕೋಟಿ ರೂ.ಗಳಲ್ಲಿ 12,000 ಮೆಟ್ರಿಕ್ ಟನ್ ಸಾಮರ್ಥ್ಯದ ಎರಡು ತೀತಲಗೃಹಗಳ ನಿರ್ಮಾಣ: ರಾಮನಗರ, ಶಿಡ್ಲಘಟ್ಟ, ಹಾವೇರಿ, ತಾಂಡವಪುರ ಹಾಗೂ ಕಲಬುರಗಿಯಲ್ಲಿ ಸಿಲ್ಕ್ ಪಾರ್ಕ್‌ಳ ಸ್ಥಾಪನೆ.
  • ಜಾನುವಾರುಗಳ ಸಂತಾನೋತ್ಪತ್ತಿಗಾಗಿ ಗ್ರಾಮ ಪಂಚಾಯಿತಿಗಳಲ್ಲಿ ‘ಫಲಧಾರೆ” ಶಿಬಿರಗಳು: ಬೆಂಗಳೂರು ಹಾಗೂ ಬೀದರ್‌ನಲ್ಲಿ ಪಶು ಸಿ.ಟಿ. ಸ್ಕ್ಯಾನಿಂಗ್ ಕೇಂದ್ರ ಮತ್ತು ಶ್ವಾನ ಸಂತಾನ ನಿಯಂತ್ರಣ ತರಬೇತಿ ಕೇಂದ್ರ ಸ್ಥಾಪನೆ.
  • ಮಂಗಳೂರು ಮೀನುಗಾರಿಕೆ ಮಹಾವಿದ್ಯಾಲಯದಲ್ಲಿ Centre of Excellence” ಸ್ಥಾಪನೆ: ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ ಮತ್ತು ಚಿಕ್ಕಮಗಳೂರಿನಲ್ಲಿ ಮತ್ಸದರ್ಶಿನಿಗಳ ಸ್ಥಾಪನೆ: ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಮತ್ತು ಬಾಗಲಕೋಟೆಯಲ್ಲಿ ಅತ್ಯಾಧುನಿಕ ಮೀನು ಮಾರುಕಟ್ಟೆಗಳ ನಿರ್ಮಾಣ.
  • 3,900 ಕೋಟಿ ರೂ.ಗಳ ವೆಚ್ಚದಲ್ಲಿ ADB, KKRDB ಮತ್ತು KMERC ನೆರವಿನೊಂದಿಗೆ 800 ಹೊಸ ಕರ್ನಾಟಕ ಪಬ್ಲಿಕ್ ಶಾಲೆಗಳ ಪ್ರಾರಂಭ.
  • ಶಾಲಾ ಕಾಲೇಜುಗಳಲ್ಲಿ ಖಾಲಿ ಇರುವ 15,000 ಬೋಧಕ ಹುದ್ದೆಗಳ ಭರ್ತಿ.
  • * 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಧ.
  • ಶಾಲಾ-ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಮಾದಕ ವಸ್ತುಗಳ ನಿಷೇಧಕ್ಕೆ ಕಟ್ಟುನಿಟ್ಟಿನ ಕ್ರಮ.
  • ADB ನೆರವಿನಡಿ 40 ಪದವಿ ಕಾಲೇಜು ಹಾಗೂ ।। ಪಾಲಿಟೆಕ್ನಿಕ್‌ಗಳ ಅಭಿವೃದ್ಧಿ ಹಾಗೂ 9 ಉತ್ಕೃಷ್ಟತಾ ಕೇಂದ್ರಗಳ ಸ್ಥಾಪನೆ: ಸರ್ಕಾರಿ ಪಾಲಿಟೆಕ್ನಿಕ್ ಹಾಗೂ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಹೆಚ್ಚಿನ ಬೇಡಿಕೆಯಿರುವ 15 ಹೊಸ ಕೋರ್ಸ್‌ಗಳ ಪಾರಂ
  • ಜಾತಿ ಆಧಾರದ ಮೇಲೆ ವಿದ್ಯಾರ್ಥಿಗಳ ಮೇಲಿನ ಶೈಕ್ಷಣಿಕ ಮತ್ತು ಸಾಮಾಜಿಕ ದೌರ್ಜನ್ಯ ತಡೆಗೆ ರೋಹಿತ್ ವೇಮುಲ ಕಾಯ್ದೆಯ ಜಾರಿ: ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆ.
  • ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ (AB-ArK) ಯೋಜನೆಯಡಿ HBP 2022 ಚಿಕಿತ್ಸಾ ಪ್ಯಾಕೇಜ್ ದರಗಳ ಜಾರಿಗೆ ಹೆಚ್ಚುವರಿ 400 ಕೋಟಿ ರೂ.
  • ಡಿಜಿಟಲ್ ಆರೋಗ್ಯ ಕಾರ್ಯಕ್ರಮದಡಿ ವಹಿಗಳ ಡಿಜಿಟಲೀಕರಣ ರೋಗಿಗಳ ಸಂಪೂರ್ಣ ಗಣಕೀಕೃತ ನೋಂದಣಿ, ಆರೋಗ್ಯ ದಾಖಲೆಗಳ ಡಿಜಿಟಲೀಕರಣ: UPI ಆಧಾರಿತ ಶುಲ್ಕ ಪಾವತಿ ವ್ಯವಸ್ಥೆ.
  • ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ 2,500 ಹುದ್ದೆಗಳ ಭರ್ತಿ,
  • ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಯ ಉನ್ನತೀಕರಣಕ್ಕಾಗಿ 180 ಕೋಟಿ ರೂ.: ಗೋವಿಂದರಾಜನಗರ ಬಿಬಿಎಂಪಿ ಆಸ್ಪತ್ರೆಯಲ್ಲಿ ಜಯದೇವ ಹೃದ್ರೋಗ ಸಂಸ್ಥೆಯ ಪ್ರಾದೇಶಿಕ ಕೇಂದ್ರದ ಸ್ಥಾಪನೆ.
  • ಪುತ್ತೂರು, ಬಾಗಲಕೋಟೆ, ವಿಜಯಪುರ, ಕೋಲಾರದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಅಗತ್ಯ ಕ್ರಮ.
  • ಕಾರವಾರ ಮತ್ತು ಯಾದಗಿರಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಸ್ಥಾಪನೆಗೆ ತಲಾ 100 ಕೋಟಿ ರೂ.
  • ಮುನಿರಾಬಾದ್-ಟಿ.ಬಿ. ಡ್ಯಾಂನಲ್ಲಿ ಕ್ಯಾನ್ಸರ್ ಆಸ್ಪತ್ರೆಯ ಸ್ಥಾಪನೆ.
  • SC/ST/BC/MWD ಇಲಾಖೆಯಡಿ 137 ಹೊಸ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳ ಪ್ರಾರಂಭ: 40 ಹೊಸ ವಸತಿ ಶಾಲೆಗಳ ಪ್ರಾರಂಭ: ಅಲೆಮಾರಿ ಜನಾಂಗದ ವಿದ್ಯಾರ್ಥಿಗಳಿಗೆ 4 ವಿಶೇಷ ವಸತಿ ಶಾಲೆಗಳ ಪ್ರಾರಂಭ: ಕಲಬುರಗಿ, ವಿಜಯಪುರ, ಬೆಳಗಾವಿ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಡಾ| ಬಿ.ಆರ್. ಅಂಬೇಡ್ಕರ್ ಹೆಸರಿನಲ್ಲಿ CBSE ಪಠ್ಯಕ್ರಮದ ನಾಲ್ಕು ಕ್ರೈಸ್ ವಸತಿ ಶಾಲೆಗಳ ಪ್ರಾರಂಭ: CBSE ಪಠ್ಯಕ್ರಮದಡಿ 10 ಹೊಸ ಸಂತ ಶಿಶುನಾಳ ಶರೀಫ ವಸತಿ ಶಾಲೆಗಳ ಪ್ರಾರಂಭ: 25 ಹೊಸ ಸಂತ ಶಿಶುನಾಳ ಶರೀಫರ ವಸತಿ ಶಾಲೆಗಳ ಪ್ರಾರಂಭ, ಸವಣೂರಿನಲ್ಲಿ ಒಂದು ಹೊಸ ಮಹಿಳಾ ಪಿ.ಯು. ಕಾಲೇಜು ಪ್ರಾರಂಭ:ವಿದ್ಯಾರ್ಥಿಗಳ ಪದವಿ ಪೂರ್ವ ಶಿಕ್ಷಣಕ್ಕಾಗಿ ಒಟ್ಟು 31 ವಸತಿ ಶಾಲೆಗಳ ಉನ್ನತೀಕರಣ: 25 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಪಿ.ಯು.ಸಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗ ಪ್ರಾರಂಭ. 18 ಎ.ಪಿ.ಜೆ. ಅಬ್ದುಲ್ ಕಲಾಂ ವಸತಿ ಶಾಲೆಗಳಲ್ಲಿ ವಾಣಿಜ್ಯ ವಿಭಾಗ ಪ್ರಾರಂಭ: 31 ಮಹಿಳಾ ಪಿ.ಯು ಕಾಲೇಜುಗಳನ್ನು ಪದವಿ ಕಾಲೇಜುಗಳನ್ನಾಗಿ ಉನ್ನತೀಕರಣ.
  • ಉದ್ಯೋಗಸ್ಥ ಮಹಿಳೆಯರಿಗೆ ಬೆಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಬೆಳಗಾವಿ ಮತ್ತು ಕಲಬುರಗಿಯಲ್ಲಿ 110 ಉದ್ಯೋಗಸ್ಥ ಮಹಿಳೆಯರ ವಸತಿ ನಿಲಯಗಳ ಪ್ರಾರಂಭ,
  • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆಗಳಲ್ಲಿ ಖಾಲಿ ಇರುವ 2,500 ಹುದ್ದೆಗಳ ಭರ್ತಿ,
  • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ನಿಗಮಗಳಿಗೆ 1,500 ಕೋಟಿ ರೂ. ಅನುದಾನ.
  • ಕರ್ನಾಟಕ ಆದಿವಾಸಿ ಅಭಿವೃದ್ಧಿ ನಿಗಮ’ ಸ್ಥಾಪನೆ.
  • ಪರಿಶಿಷ್ಟ ಪಂಗಡಗಳ ಆಯೋಗ ಸ್ಥಾಪನೆ.
  • ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ 5 ಕೆ.ಜಿ ಅಕ್ಕಿಯ ಬದಲಾಗಿ ಇಂದಿರಾ ಆಹಾರ ಕಿಟ್ ವಿತರಣೆ.
  • ಕಟ್ಟಡ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕಾಗಿ ತಲಾ 60 ಕೋಟಿ ರೂ.ಗಳ ವೆಚ್ಚದಲ್ಲಿ 10 GTTC ಕೇಂದ್ರಗಳ ಸ್ಥಾಪನೆ: 104 ಶ್ರಮಿಕ ವಸತಿ ಶಾಲೆಗಳ ಪ್ರಾರಂಭ.
  • ಹುಬ್ಬಳ್ಳಿ-ಧಾರವಾಡ 200 ಕೋಟಿ ರೂ.ಗಳ ವೆಚ್ಚದಲ್ಲಿ ಕೌಶಲ್ಯ ತರಬೇತಿ ಅಕಾಡೆಮಿ ಸ್ಥಾಪನೆ
  • ಯುವನಿಧಿ ಯೋಜನೆಯಡಿ 3,08,267 ಫಲಾನುಭವಿಗಳಿಗೆ 913 ಕೋಟಿ ರೂ. ನಿರುದ್ಯೋಗ ಭತ್ಯೆ ಪಾವತಿ,
  • ADB ಸಹಭಾಗಿತ್ವದಲ್ಲಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳು, ಕೆಜಿಟಿಟಐಗಳು, ಕೆಎಸ್‌ಡಿಎ ಮತ್ತು ಜೆಟಿಎಸ್‌ಗಳ ಉನ್ನತೀಕರಣಕ್ಕೆ 1386 ಕೋಟಿ ರೂ.ಗಳ K-QUEST ಯೋಜನೆ.
  • 16 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಮತ್ತು ಕಲಬುರಗಿಯಲ್ಲಿ ಎರಡು ಪ್ರೈಡರ್ ಎಲೆಕ್ನಿಕ್ ಯೂತ್ ಇಂಪ್ಯಾಕ್ಟ್ ಕೇಂದ್ರಗಳ ಸ್ಥಾಪನೆ.
  • ಐದನೇ ರಾಜ್ಯ ಹಣಕಾಸು ಆಯೋಗದ ವರದಿ ಆಧಾರದಲ್ಲಿ ಸ್ಥಳೀಯ ಸಂಸ್ಥೆಗಳ ಹಂಚಿಕೆ NLNORR ನ ಶೇ.48 ರಿಂದ ಶೇ.50 ಕ್ಕೆ ಹೆಚ್ಚಳ, ಇದರಲ್ಲಿ ಶೇ.35 ಪಂಚಾಯತ ರಾಜ್ ಸಂಸ್ಥೆಗಳಿಗೆ, ಶೇ.15 ನಗರ ಸ್ಥಳೀಯ ಸಂಸ್ಥೆಗಳಿಗೆ ಹಂಚಿಕೆ.
  • VB G RAM G ಯೋಜನೆ ಜಾರಿಯಿಂದ ನರೇಗಾ ಯೋಜನೆಯ ಹಕ್ಕು ಆಧಾರಿತ ದೃಷ್ಟಿಕೋನ ದುರ್ಬಲ, ಮಹಾತ್ಮಾ ಗಾಂಧಿಯವರ ಗ್ರಾಮ ಸ್ವರಾಜ್ ಪರಿಕಲ್ಪನೆಗೆ ವಿರುದ್ಧ, ನರೇಗಾ ಯೋಜನೆಯನ್ನು ಮನ:ಸ್ಥಾಪಿಸಲು ಕೇಂದ್ರ ಸರ್ಕಾರಕ್ಕೆ ಆಗ್ರಹ, ಅಗತ್ಯವಿದ್ದಲ್ಲಿ ಕಾನೂನು ಹೋರಾಟ.
  • ಪ್ರೊ. ಎಂ. ಗೋವಿಂದರಾವ್‌ರವರ ಸಮಿತಿಯಿಂದ ಅಭಿವೃದ್ಧಿ ಮತ್ತು ಪ್ರಾದೇಶಿಕ ಅಸಮತೋಲನೆ ಬಗ್ಗೆ ವರದಿ ಸಲ್ಲಿಕೆ: ಪ್ರಾದೇಶಿಕ ಅಸಮತೋಲನೆ ನಿವಾರಣೆಗೆ 4,291 ಕೋಟಿ ರೂ.ಗಳ ಮೀಸಲು.
  • ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ 5,000 ಕೋಟಿ ರೂ.ಗಳ ಕ್ರಿಯಾ ಯೋಜನೆ. ಮಂಡಳಿಯ ವಿವೇಚನಾ ಮತ್ತು ಮ್ಯಾಕ್ರೋ ಅನುದಾನಗಳಲ್ಲಿ ಶೇ.40ರಷ್ಟು ಆರೋಗ್ಯ ಶಿಕ್ಷಣ ಮತ್ತು ಅಪೌಷ್ಠಿಕತೆ ನಿವಾರಣೆ ಕಾರ್ಯಕ್ರಮಗಳಿಗೆ ಮೀಸಲು.
  • ಬೆಂಗಳೂರು ಮೂಲಸೌಕರ್ಯ ಅಭಿವೃದ್ಧಿಗೆ 7,000 ಕೋಟಿ ರೂ. ಅನುದಾನ
  • ಬೆಂಗಳೂರಿಗೆ ಹೊಸ ಪರಿಷ್ಕೃತ ಮಾಸ್ಟರ್ ಪ್ಲಾನ್-2041 ಮತ್ತು ಸಮಗ್ರ ಮೊಬಿಲಿಟಿ ಯೋಜನೆ.
  • 3,000 ಕೋಟಿ ರೂ. ಮೊತ್ತದಲ್ಲಿ ಬೆಂಗಳೂರಿನಲ್ಲಿ 450 ಕಿ.ಮೀ ರಸ್ತೆಗೆ ವೈಟ್ ಟ್ಯಾಪಿಂಗ್,
  • 175 ಜಂಕ್ಷನ್‌ಗಳ ಸೌಂದರ್ಯೀಕರಣ. 500 ಕಿ.ಮೀ ಉದ್ದದ ಪಾದಚಾರಿ ಮಾರ್ಗಗಳ ಮೇಲ್ದರ್ಜೆ ಮತ್ತು 100 Sky Walke
  • 160 ಕೋಟಿ ರೂ.ಗಳ ವೆಚ್ಚದಲ್ಲಿ ಹೊರ ವರ್ತುಲ ರಸ್ತೆಯ ಮೆಟ್ರೋ ವಯಾಡಕ್ಷ ಉದ್ದಕ್ಕೂ 9 ಕಿ.ಮೀ ಪಾದಚಾರಿ ನಡಿಗೆ ಮಾರ್ಗ ನಿರ್ಮಾಣ.
  • JICA ನೆರವಿನೊಂದಿಗೆ 6,939 ಕೋಟಿ ರೂ.ಗಳ ಮೊತ್ತದಲ್ಲಿ ಕಾವೇರಿ 6ನೇ ಹಂತದ ಯೋಜನೆ ಅನುಷ್ಠಾನ.
  • 40 ಕಿ.ಮೀ ಉದ್ದದ ಸುರಂಗ ಮಾರ್ಗದ ಕಾಮಗಾರಿಯನ್ನು HOOT ಮಾದರಿಯಲ್ಲಿ 40,000 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ನಿರ್ಮಾಣ.
  • 2,250 ಕೋಟಿ ರೂ. ವೆಚ್ಚದಲ್ಲಿ ಹೆಬ್ಬಾಳ ಜಂಕ್ಷನ್ ನಿಂದ ಮೇಕ್ರಿ ಸರ್ಕಲ್‌ವರೆಗೆ ಸುರಂಗ ಮಾರ್ಗ ಮತ್ತು ಮೇಲು ಸೇತುವೆ ನಿರ್ಮಾಣ.
  • ಬೆಂಗಳೂರಿನಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ಮಿಸಲು AAI ತಾಂತ್ರಿಕ ಅಭಿಪ್ರಾಯ ಪಡೆದು ಕಾರ್ಯಸಾಧ್ಯತಾ ವರದಿ ತಯಾರಿಕೆ.
  • ಅಣ್ಣಿಗೇರಿ, ಗುಂಡ್ಲುಪೇಟೆ. ನೆಲಮಂಗಲ, ದೊಡ್ಡಬಳ್ಳಾಪುರ, ಭದ್ರಾವತಿ, ದೇವನಹಳ್ಳಿ, ಮೈಸೂರು ಆಳಂದ, ಅಫಜಲ್ ಪುರ, ಚಿತ್ತಾಪುರ, ಯಾದಗಿರಿ, ಹರಪನಹಳ್ಳಿ, ಜೇವರ್ಗಿ ಮತ್ತು ಸುರಪುರ ಪಟ್ಟಣಗಳಲ್ಲಿ ಒಳಚರಂಡಿ ವ್ಯವಸ್ಥೆ ಕಾಮಗಾರಿ ಅನುಷ್ಠಾನ.
  • ರಾಯಚೂರು, ಬೀದ‌ರ್ ಮತ್ತು ಹಾಸನ ಮಹಾನಗರ ಪಾಲಿಕೆಗಳಿಗೆ ಮಹಾತ್ಮಾ ಗಾಂಧಿ ನಗರ ವಿಕಾಸ: ಯೋಜನೆ 2.0 ರಡಿ ತಲಾ 200 ಕೋಟಿ ರೂ.
  • ನೀರಾವರಿ ಪಂಪ್‌ಸೆಟ್ ವಿದ್ಯುತ್ ಸಹಾಯಧನದಡಿ 36 ಲಕ್ಷ ಪಂಪ್‌ಸೆಟ್ ಗಳಿಗೆ 19.290 ಕೋಟಿ ರೂ. ಹಾಗೂ ಗೃಹಜ್ಯೋತಿ ಯೋಜನೆಗೆ 10,578 ಕೋಟಿ ರೂ.
  • KUSUM-C ಯೋಜನೆಯಡಿ 2,777 ಮೆ.ವ್ಯಾ ಸಾಮರ್ಥ್ಯದ ಸೋಲಾರ್ ವಿದ್ಯುತ್ ಉತ್ಪಾದನೆ.
  • ಮುಖ್ಯಮಂತ್ರಿ ಸೌರ ಕೃಷಿ ಯೋಜನೆ ಎಂಬ ಹೊಸ ಯೋಜನೆಯಡಿ RESCO ಮಾದರಿಯಲ್ಲಿ 10,500 ಕೋಟಿ ರೂ. ವೆಚ್ಚದಲ್ಲಿ 3000 MW ವಿದ್ಯುತ್ ಸ್ವಾವರಗಳ ಪ್ರಾರಂಭ.
  • KPTCL ವತಿಯಿಂದ ಪ್ರಸರಣ ಜಾಲವನ್ನು ವೃದ್ಧಿಸಲು 100 ಹೊಸ ಉಪ ಕೇಂದ್ರಗಳ ಸ್ಥಾಪನೆ.
  • 3,400 ಕೋಟಿ ರೂ. ವೆಚ್ಚದಲ್ಲಿ ಹುಲಿಯೂರು, ಪಾವಗಡ ಮತ್ತು ಕುಷ್ಟಗಿಯ ಸಬ್ ಸ್ಟೇಷನ್‌ಗಳಲ್ಲಿ 2,000 MWh ಬ್ಯಾಟರಿ ಶಕ್ತಿ ಸಂಗ್ರಹ ವ್ಯವಸ್ಥೆಯ ಅಳವಡಿಕೆ.
  • ಎಲೆಕ್ಟಿಕ್ ವಾಹನದ ಬಳಕೆಗಾಗಿ 777 ಕೋಟಿ ರೂ.ಗಳ ವೆಚ್ಚದಲ್ಲಿ 1.250 ವಾಹನ ಚಾರ್ಜಿಂಗ್ ಕೇಂದ್ರಗಳನ್ನು ಪಿ.ಎಮ್.ಇ-ಡ್ರೈವ್ ಯೋಜನೆಯಡಿ ಸ್ಥಾಪನೆ.
  • ಮುಂದಿನ ಎರಡು ವರ್ಷಗಳಲ್ಲಿ 2,000 ಕೋಟಿ ರೂ. ಮೊತ್ತದಲ್ಲಿ ಸೇತುವೆಗಳ ನಿರ್ಮಾಣ.
  • ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಹಂತ-5 ಘಟ್ಟ-2ರಡಿ 5,000 ಕೋಟಿ ರೂ. ಮೊತ್ತದಲ್ಲಿ 1846 ಕಿ.ಮೀ ರಸ್ತೆಯ ಅಭಿವೃದ್ಧಿ,
  • ADB ನೆರವಿನ KSHIP-IV ಅಡಿಯಲ್ಲಿ 5,736 ಕೋಟಿ ರೂ.ಗಳ ವೆಚ್ಚದಲ್ಲಿ 875 ಕಿ.ಮೀ ಉದ್ದದ ರಸ್ತೆ ನಿರ್ಮಾಣದ ಯೋಜನಾ ವರದಿ.
  • ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ವಾಹನ ಸ್ಟ್ರಾಪಿಂಗ್ ಸೌಲಭ್ಯ ಘಟಕದ ಸ್ಥಾಪನೆ.
  • 500 ಕೋಟಿ ರೂ.ಗಳ ವೆಚ್ಚದಲ್ಲಿ ಮಂಡ್ಯದಲ್ಲಿ ನಿರ್ಮಾಣ ಮತ್ತು ಮೂಲಸೌಕರ್ಯ ಸಲಕರಣೆಗಳ ಪರೀಕ್ಷಾ ಘಟಕ’ ಸ್ಥಾಪನೆಗೆ 100 ಎಕರೆ ಜಮೀನು.
  • KIADB ಏರೋಸ್ಪೇಸ್ ಪಾರ್ಕನಲ್ಲಿ ಏರೋಸ್ಪೇಸ್ ಕಾಮನ್ ಫೆಸಿಲಿಟಿ ಸೆಂಟರ್ ಸ್ಥಾಪನೆಗೆ 30 ಕೋಟಿ
  • MICE ಆಯೋಜನೆಗಾಗಿ ಮೈಸೂರು ಲ್ಯಾಂಪ್ ವರ್ಕ್ಸ್ ಲಿಮಿಟೆಡ್ ಆವರಣದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸಮಾವೇಶ ಕೇಂದ್ರ ಸಂಕೀರ್ಣ ನಿರ್ಮಾಣ.
  • ಬೆಳಗಾವಿ ಜಿಲ್ಲೆಯಲ್ಲಿ 1,000 ಎಕರೆ ಪ್ರದೇಶದಲ್ಲಿ ಕೈಗಾರಿಕಾ ಪಾರ್ಕ್ ಅಭಿವೃದ್ಧಿ,
  • ಬೆಂಗಳೂರು-ಮುಂಬೈ ಕೈಗಾರಿಕಾ ಕಾರಿಡಾರ್ ಯೋಜನೆಗೆ 600 ಕೋಟಿ ರೂ.
  • MSE-CDP ಯೋಜನೆಯಡಿ 15 ಕೋಟಿ ರೂ. ವೆಚ್ಚದಲ್ಲಿ 10 ಕ್ಲಸ್ಟರ್‌ಗಳ ಸ್ಥಾಪನೆ.
  • LEAP & “Super 100 Industry-Academia Adoption Program”, -ಕಾಂಬಿನೇಟ‌ರ್ ವೇಗವರ್ಧಕ ಕಾರ್ಯಕ್ರಮ, ಹುಬ್ಬಳ್ಳಿ, ಕಲಬುರಗಿ, ಹೊಸಕೋಟೆ ಮತ್ತು ಮೈಸೂರಿನಲ್ಲಿ ಫಗ-ಅಂಡ್-ಪ್ಲೇ ಸೌಲಭ್ಯದ ‘ಲೀಪ್ ಲ್ಯಾಬ್’ ಗಳ ಸ್ಥಾಪನೆ.
  • ಕಿಯೋನಿಕ್ಸ್ ಮೂಲಕ ಮಂಗಳೂರಿನಲ್ಲಿ IT Park ಅನ್ನು ಅಭಿವೃದ್ಧಿಗೊಳಿಸಿ GCC ಅನ್ನು ಪ್ರೋತ್ಸಾಹಿಸಲಾಗುವುದು.
  • ಮೈಸೂರು ನಗರವನ್ನು ರಾಜ್ಯದ ಎರಡನೇ ಐಟಿ ಸಿಟಿಯನ್ನಾಗಿ ಅಭಿವೃದ್ಧಿ,
  • ಮೈಸೂರಿನ ದಟ್ಟಗಳ್ಳಿಯಲ್ಲಿ ಆಧುನಿಕ ಸೈಕ್ಲಿಂಗ್ ವೆಲೋಡೋಮ್.
  • ಬಂಗಾರಪೇಟೆ, ಮುದ್ದೇಬಿಹಾಳ, ಗುಳೇದಗುಡ್ಡ, ಕನಕಪುರ, ಕುಕನೂರು ಮತ್ತು ಮಸ್ಕಿಯಲ್ಲಿ ತಾಲ್ಲೂಕು ಕ್ರೀಡಾಂಗಣಗಳ ನಿರ್ಮಾಣ.
  • ‘ಸಮಗ್ರ ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆ’ ರೂಪಿಸಿ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ.
  • ಮಾನವ-ವನ್ಯ ಪ್ರಾಣಿ ಸಂಘರ್ಷ ನಿವಾರಣಾ ಕಾರ್ಯತಂತ್ರ ಯೋಜನೆಗೆ ಮುಂದಿನ ಐದು ವರ್ಷಗಳಲ್ಲಿ 1500 ಕೋಟಿ ರೂ.ಗಳ ವೆಚ್ಚದಲ್ಲಿ ವಿವಿಧ ಕ್ರಮಗಳು.
  • 50 ಕೋಟಿ ರೂ. ವೆಚ್ಚದಲ್ಲಿ ಭೂಮಿ 8.0 ಸಾಫ್ಟ್‌ವೇರ್ ಅಭಿವೃದ್ಧಿ.
  • ಕಂದಾಯ ಇಲಾಖೆಯ 43 ಸೇವೆಗಳನ್ನು ‘ಕುಟುಂಬ’, ‘ಫೂಟ್ಸ್’ ಮತ್ತು ‘ಭೂಮಿ’ ದತ್ತಾಂಶಗಳನ್ನು ಸಂಯೋಜಿಸಿ, ನಿರ್ಣಯ ನೆರವು ವ್ಯವಸ್ಥೆ (Decision Support System) ಸೌಲಭ್ಯ
  • ಭೂದಾಖಲೆಗಳ ಕಛೇರಿಗಳಲ್ಲಿ 72 ಕೋಟಿ ರೂ. ವೆಚ್ಚದಲ್ಲಿ ನವೀಕೃತ ಅಭಿಲೇಖಾಲಯಗಳ ಸ್ಥಾಪನೆ.
  • ಗೃಹ ಇಲಾಖೆಯಲ್ಲಿ ಖಾಲಿ ಇರುವ 8,000 ಹುದ್ದೆಗಳ ನೇರ ನೇಮಕಾತಿ. ಗೃಹ ಇಲಾಖೆಯಲ್ಲಿನ ಹುದ್ದೆಗಳ ನೇಮಕಾತಿಗೆ ಪೊಲೀಸ್ ಮತ್ತು ಪೊಲೀಸ್ ಸಹಾಯಕ ಸೇವೆಗಳ ನೇಮಕಾತಿ ಮಂಡಳಿ ಸ್ಥಾಪನೆ.
  • 12 ನೂತನ ಪೊಲೀಸ್ ಠಾಣೆಗಳ ಸ್ಥಾಪನೆ. 10 ಪೊಲೀಸ್ ಠಾಣೆ ಕಟ್ಟಡ ನಿರ್ಮಾಣಕ್ಕೆ 30 ಕೋಟಿ ರೂ.
  • ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ (ANTF) ಘಟಕ ಬಲವರ್ಧನೆಗೆ 10 ಕೋಟಿ ರೂ
  • ‘ಆಪರೇಷನ್ ಪರಿಶುದ್ದೀಕರಣ’ ದಡಿಯಲ್ಲಿ ಕಾರಾಗೃಹಗಳಲ್ಲಿ ಮೊಬೈಲ್, ಗಾಂಜಾ ಹಾಗೂ ಇನ್ನಿತರ ನಿಷೇಧಿತ ವಸ್ತುಗಳ ಬಳಕೆ, ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಲು 20 ಕೋಟಿ ರೂ. ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ‘ಮಾದಕ ದ್ರವ್ಯ ವ್ಯಸನಮುಕ್ತ ಕೇಂದ್ರ’,
  • ಶಕ್ತಿ ಯೋಜನೆಯಡಿ 684 ಕೋಟಿ ಟ್ರಿಪ್‌ಗಳಲ್ಲಿ ಮಹಿಳಾ ಫಲಾನುಭವಿಗಳ ಪ್ರಯಾಣ. ಈ ಯೋಜನೆಯ ಅನುಷ್ಠಾನಕ್ಕಾಗಿ 5,300 ಕೋಟಿ ರೂ.
  • ರಸ್ತೆ ಸಾರಿಗೆ ನಿಗಮಗಳ ಸಿಬ್ಬಂದಿಗಳ ವೇತನ ಬಾಕಿ ಪಾವತಿಗಾಗಿ 1,271 ಕೋಟಿ ರೂ.
  • ರಾಜ್ಯ ರಸ್ತೆ ಸಾರಿಗೆ ನಿಗಮಗಳಿಗೆ 1,000 ಡೀಸೆಲ್ ಬಸ್ಸುಗಳನ್ನು ಒದಗಿಸುವುದು. ವಿಶ್ವಬ್ಯಾಂಕ್ ನೆರವಿನ 2.000 ๑ ๑. Karnataka Electric Bus Program (KEBP) ಅನುಷ್ಠಾನ. BMTC ಸಂಸ್ಥೆಯ 32. ಇತರೆ ಸಂಸ್ಥೆಗಳ 62 ಎಲೆಕ್ಟಿಕ್ ಬಸ್ ಡಿಪೋಗಳ ಅಭಿವೃದ್ಧಿ, 4,000 ವಿದ್ಯುತ್ ಚಾಲಿತ ಬಸ್ಸುಗಳ ಪೂರೈಕೆ.
    ನವೀಕರಿಸಬಹುದಾದ ಇಂಧನ ಮತ್ತು Al ಮೂಲಕ ತಂತ್ರಜ್ಞಾನಾಧಾರಿತ ಸಮಗ್ರ ಅಭಿವೃದ್ಧಿ
  • ‘ಬೆಂಗಳೂರು ರೋಬೋಟಿಕ್ಸ್ ಮತ್ತು Al ಇನ್ನೊವೇಶನ್ ಝನ್’ (BRAINz) ಎಂಬ ರೋಬೋಟಿಕ್ಸ್ ಮತ್ತು Al ಕ್ಯಾಂಪಸ್ ಅನ್ನು ಸ್ಥಾಪಿಸಲಾಗುವುದು.
  • IIIT ರಾಯಚೂರಿನಲ್ಲಿ Al ಶ್ರೇಷ್ಟತಾ ಕೇಂದ್ರವನ್ನು ಸ್ಥಾಪಿಸಲಾಗುವುದು.
  • ಬೆಂಗಳೂರಿನಲ್ಲಿ ಅತ್ಯಾಧುನಿಕ Al ಉತ್ಕೃಷ್ಟತಾ ಕೇಂದ್ರವನ್ನು ಸ್ಥಾಪಿಸುವ ಉದ್ದೇಶದಿಂದ Institute of Bioinformatics and Applied Biotechnology. Centre for Cellular and Molecular Platforms ಹಾಗೂ NASSCOM ಸಂಸ್ಥೆಯ ಸಹಭಾಗಿತ್ವದಲ್ಲಿ ಸ್ಥಾಪಿಸಲಾಗುವುದು.
  • 65 ಕೋಟಿ ರೂ.ಗಳ ವೆಚ್ಚದಲ್ಲಿ ಕಾವೇರಿ 3.0 ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗುವುದು. ಇದು AI ಮೂಲಕ ಕಾಗದರಹಿತ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಲಿದೆ.
  • ಎಲ್ಲಾ ಅಂಗನವಾಡಿಗಳು, ಶಾಲೆಗಳು, ಕಾಲೇಜುಗಳು ಹಾಗೂ ವಸತಿನಿಲಯಗಳಲ್ಲಿ Al ಆಧಾರಿತ Facial Recognition ಸಾಫ್ಟ್‌ವೇರ್ ಹಾಜರಾತಿ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು.
  • ರಾಜ್ಯದ 2ನೇ ಮತ್ತು 3ನೇ ಹಂತದ ನಗರಗಳಲ್ಲಿನ 50 ಸರ್ಕಾರಿ ಕಾಲೇಜುಗಳಲ್ಲಿ ಆಧುನಿಕ AI ಪ್ರಯೋಗಾಲಯಗಳನ್ನು ಪ್ರಾರಂಭಿಸಲು
  • ರೈತರಿಗೆ ಒಂದೇ ಸೂರಿನಡಿ ಹವಾಮಾನ, ಮಾರುಕಟ್ಟೆ, ತಾಂತ್ರಿಕತೆ ಮಾಹಿತಿಯನ್ನು ತ್ವರಿತವಾಗಿ ಒದಗಿಸಲು ಕೃಷಿ ಇಲಾಖೆಯ ‘ರೈತ ಕರೆ ಕೇಂದ್ರ’ವನ್ನು Al ತಂತಜ್ಞಾನದಿಂದ ಉನ್ನತೀಕರಿಸಲಾಗುವುದು.
  • IIT ಧಾರವಾಡದ ಸಹಯೋಗದೊಂದಿಗೆ 8 ರಿಂದ 12ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡುತ್ತಿರುವವರಿಗೆ Al ತಂತ್ರಜ್ಞಾನವನ್ನು ಅಳವಡಿಸಿಕೊಂಡು ವೈಯಕ್ತಿಕ ಸ್ವಯಂ-ಕಲಿಕಾ ಡಿಜಿಟಲ್ ಬ್ಯೂಟರ್ ಸೌಲಭ್ಯವನ್ನು ಒದಗಿಸಲಾಗುವುದು.
  • ಹಿಂದುಳಿದ ವರ್ಗಗಳ 250 ಇಂಜಿನಿಯರಿಂಗ್ ಪದವೀಧರರಿಗೆ NITAIT/IIM ಗಳಲ್ಲಿ AI ತರಬೇತಿ ನೀಡಲಾಗುವುದು
  • ಪ್ರಸ್ತುತ ಜಾರಿಯಲ್ಲಿರುವ ಇಲಾಖೆಯ ಸಹಾಯವಾಣಿ food dept Al ಆಧಾರಿತ ‘Smart Annavani’ ಯನ್ನಾಗಿ ಪರಿವರ್ತಿಸಲಾಗುವುದ

    ಮಾದಕ ವಸ್ತು ಮತ್ತು ವ್ಯಸನ ಮುಕ್ತಿ ಕುರಿತು ವಿವಿಧ ಕ್ರಮಗಳು

  • ಕರ್ನಾಟಕವನ್ನು ಮಾದಕ ವಸ್ತು ಮುಕ್ತ ರಾಜ್ಯವನ್ನಾಗಿ ಮಾಡಲು Zero Tolerance to Drugs ಧೈಯದೊಂದಿಗೆ ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ (ANTF) ಬಲಪಡಿಸಲಾಗುವುದು.
  • ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಮಾದಕ ದ್ರವ್ಯ ವ್ಯಸನ ಮುಕ್ತ ಕೇಂದ್ರ’ವನ್ನು ಸ್ಥಾಪಿಸಲಾಗುವುದು.
  • ಶಾಲಾ-ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಮಾದಕ ವಸ್ತುಗಳ ಬಳಕೆಯನ್ನು ತಡೆಯಲು ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಜಾಗೃತಿ ಕಾರ್ಯಕ್ರಮ, ಕಠಿಣ ನಿಯಮ ಹಾಗೂ ಸಹಾಯ ಕೇಂದ್ರಗಳ ಮೂಲಕ ಮಾದಕ ವಸ್ತುಗಳ ಮೇಲೆ ಕಟ್ಟುನಿಟ್ಟಿನ ನಿರ್ಬಂಧ ಹೇರಲಾಗುವುದು.
  • ಮಾದಕ ವ್ಯಸನಕ್ಕೆ ಒಳಗಾದ 18 ವರ್ಷದೊಳಗಿನ ಮಕ್ಕಳಿಗಾಗಿ ‘ಮಾದಕ ವ್ಯಸನಿಗಳ ಪುನರ್ವಸತಿ ಕೇಂದ್ರ ಗಳನ್ನು ಪ್ರಾರಂಭಿಸಲಾಗುವುದು.
  • ಅಬಕಾರಿ ಇಲಾಖೆಯು ಕೇವಲ ತೆರಿಗೆ ಸಂಗ್ರಹಣೆ ಮೇಲೆ ಕೇಂದ್ರೀಕರಿಸಲಿದ್ದು, ಆರೋಗ್ಯ ಇಲಾಖೆಯು ಮದ್ಯಪಾನದಿಂದ ಉಂಟಾಗುವ ನಕಾರಾತ್ಮಕ ಪರಿಣಾಮಗಳು, ಮದ್ಯ ವ್ಯಸನಮುಕ್ತಿ ಮತ್ತು ಪುನರ್ವಸತಿ ಕಾರ್ಯಕ್ರಮಗಳನ್ನು ನಿರ್ವಹಿಸಲಿದೆ.

ಕರ್ನಾಟಕ ಸರ್ಕಾರ ನೇಮಕಾತಿ 2026 – 56,432 ಹುದ್ದೆಗಳು

ವಿವಿಧ ಇಲಾಖೆಗಳಲ್ಲಿ ಆಡಳಿತ ಸುಧಾರಣೆಗಳು-

  • ಇ-ಆಡಳಿತ ಇಲಾಖೆಯಲ್ಲಿ ದತ್ತಾಂಶ ವಿಶ್ಲೇಷಣಾ ಕೋಶವನ್ನು ಒಂದು ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುವುದು.
  • 2026-27ನೇ ಸಾಲಿನಲ್ಲಿ ಖಜಾನೆ ಇಲಾಖೆಯು ಎಲ್ಲಾ ಬಿಲ್ಲುಗಳನ್ನು ಕಾಗದರಹಿತ ಮಾಡುವ ಯೋಜನೆ ಇದೆ. ಸಾರ್ವಜನಿಕ ಉದ್ದಿಮೆಗಳು ಮತ್ತು ಸ್ವಾಯತ್ತ ಸಂಸ್ಥೆಗಳ ಹಣಕಾಸು ಮೇಲ್ವಿಚಾರಣೆಯನ್ನು ನಿರ್ವಹಿಸಲು ರಾಜ್ಯ PPMS ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲಾಗಿದೆ. ಹೊಸದಾಗಿ ಸರ್ಕಾರಿ ಸೇವೆಗೆ ಸೇರಿದ ನೌಕರರ ವೇತನ ಪ್ರಕ್ರಿಯೆ ಸಮಯವನ್ನು ಒಂದು ವಾರದೊಳಗೆ ತ್ವರಿತಗೊಳಿಸಲಾಗುತ್ತಿದೆ ಮತ್ತು ನಿವೃತ್ತ ನೌಕರರಿಗೆ ಪಿಂಚಣಿ ದಾಖಲೆಗಳ ಡಿಜಿಟಲ್ ಸಲ್ಲಿಕೆ ಮತ್ತು ಟ್ರ್ಯಾಕಿಂಗ್ ಸೌಲಭ್ಯ ಒದಗಿಸಲಾಗಿದೆ.
  • ಅಬಕಾರಿ ಇಲಾಖೆಯಲ್ಲಿ ಜಾರಿಗೊಳಿಸಲಾದ ವರ್ಗಾವಣಾ ನಿಯಮಗಳನ್ವಯ ಅಬಕಾರಿ ನಿರೀಕ್ಷಕರು. ಅಬಕಾರಿ ಉಪ ನಿರೀಕ್ಷಕರು, ಅಬಕಾರಿ ಮುಖ್ಯ ಪೇದೆ/ಪೇದೆಗಳ ಗ್ರೂಪ್-ಸಿ ವೃಂದದ ನೌಕಾರರ ವರ್ಗಾವಣೆಗಳನ್ನು ಡಿಜಿಟಲ್ ಕೌನ್ಸಿಲಿಂಗ್ ಮೂಲಕ ಮಾಡಲಾಗಿದೆ. ಅಬಕಾರಿ ಇಲಾಖೆಯಲ್ಲಿಪಾರದರ್ಶಕತೆಯನ್ನು ಮತ್ತಷ್ಟು ಹೆಚ್ಚಿಸಲು ಅಬಕಾರಿ ಉಪ ಅಧೀಕ್ಷಕರು ಮತ್ತು ಅಬಕಾರಿ ಅಧೀಕ್ಷಕರುಗಳ ವರ್ಗಾವಣೆಯನ್ನು ಸಹ ಡಿಜಿಟಲ್ ಕೌನ್ಸಿಲಿಂಗ್ ಮೂಲಕ ಮಾಡಲು ಕ್ರಮವಹಿಸಲಾಗುವುದು.
  • ಕಳೆದ ಎರಡು ವರ್ಷಗಳಲ್ಲಿ, ಅಬಕಾರಿ ಇಲಾಖೆಯಲ್ಲಿ ಪಾರದರ್ಶಕತೆ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಮಹತ್ವದ ಕ್ರಮಗಳನ್ನು ನಾವು ಕೈಗೊಂಡಿದ್ದೇವೆ. ವಿವಿಧ ಸನ್ನದುಗಳ ಮಾನ್ಯತೆಯನ್ನು ಒಂದು ವರ್ಷದಿಂದ ಐದು ವರ್ಷಗಳಿಗೆ ವಿಸ್ತರಿಸಲಾಗಿದೆ. ಆನ್‌ಲೈನ್ ಅನುಮೋದನೆ ಪ್ರಕ್ರಿಯೆಯನ್ನು 16 ಹಂತಗಳಿಂದ 7 ಹಂತಗಳಿಗೆ ಸರಳೀಕರಿಸಲಾಗಿದ್ದು, ಎರಡು ದಿನಗಳೊಳಗೆ ಅನುಮೋದನೆ ನೀಡಲಾಗುತ್ತಿದೆ.
  • ಮದ್ಯಪಾನದ ದುಷ್ಪರಿಣಾಮಗಳು సమాజన ಮೇಲೆ ಉಂಟುಮಾಡುವ ಹಾನಿಯನ್ನು ಗಮನದಲ್ಲಿಟ್ಟುಕೊಂಡು ಜಾಗತಿಕ ಮಟ್ಟದಲ್ಲಿ ಮದ್ಯದ ಅಂಶವನ್ನು (Alcohol-in-Beverage AIB) ಆಧರಿಸಿದ ತೆರಿಗೆ ಪದ್ಧತಿಯು gold standard ಆಗಿದೆ. ಏಪ್ರಿಲ್ 2026ರಿಂದ ಪಾನೀಯಗಳಲ್ಲಿ ಇರುವ ಮದ್ಯದ ಅಂಶವನ್ನು ಆಧಾರವಾಗಿಟ್ಟುಕೊಂಡ ಅಬಕಾರಿ ಸುಂಕ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು.
  • ಅಬಕಾರಿ ಸುಂಕವು ಏಕರೂಪವಾಗಿರಲಿದ್ದು, ಹೆಚ್ಚುವರಿ ಅಬಕಾರಿ ಸುಂಕವನ್ನು ನಿರ್ದಿಷ್ಟ ಮಿತಿಯೊಳಗೆ ex-factory ದರ ಪಟ್ಟಿಗಳ ಆಧಾರದ ಮೇಲೆ ವಿಧಿಸಲಾಗುವುದು. ಇದರಿಂದ ಮದ್ಯ ಬೆಲೆಯಲ್ಲಿ ತೀವ್ರ ಬದಲಾವಣೆಯಾಗದೆ, ಕ್ರಮೇಣವಾಗಿ ವ್ಯತ್ಯಾಸವಾಗುವಂತೆ ಖಚಿತ ಪಡಿಸಲಾಗುವುದು.
  • ಹೊಸ ನೀತಿಯಡಿ ಸರ್ಕಾರದಿಂದ ಮದ್ಯದ ಬೆಲೆ ನಿರ್ಧಾರವಾಗುವುದನ್ನು ಮುಕ್ತಗೊಳಿಸಲಾಗುವುದು. ಮಾರುಕಟ್ಟೆ ಪರಿಗಣನೆ ಆಧಾರದ ಮೇಲೆ ಮದ್ಯ ಉತ್ಪನ್ನಗಳನ್ನು ಸ್ಟ್ರಾಬ್‌ಗಳಲ್ಲಿ ಇರಿಸುವ ಅಧಿಕಾರವನ್ನು ಸಂಪೂರ್ಣವಾಗಿ ಉತ್ಪಾದಕರಿಗೆ ನೀಡಲಾಗುವುದು.
  • ದರ ನಿಗದಿ ಸ್ಟ್ರಾಬ್‌ಗಳನ್ನು ತರ್ಕಬದ್ಧಗೊಳಿಸುವ ಸಲುವಾಗಿ ಪ್ರಸ್ತುತ ಇರುವ 16 ಸ್ಟ್ರಾಬ್‌ಗಳನ್ನು 8 ಸ್ಟ್ರಾಬ್‌ಗಳಿಗೆ ಇಳಿಸಲಾಗುವುದು.
  • ತೆರಿಗೆ ಸೋರಿಕೆಯನ್ನು ತಡೆಯಲು ತಂತ್ರಜ್ಞಾನ ಆಧಾರಿತ ಬ್ಲಾಕ್‌ ಚೈನ್ ಡಿಜಿಟಲ್ ಟ್ರ್ಯಾಕಿಂಗ್ ವ್ಯವಸ್ಥೆಗಳನ್ನು ಜಾರಿಗೆ ತರಲಾಗುವುದು. ಮದ್ಯ ರವಾನೆಗೆ ಬೆಂಗಾವಲು ವ್ಯವಸ್ಥೆಯ ಬದಲಿಗೆ ಜಿಯೋ-ಫೆನ್ಸ್ ಇ-ಲಾಕ್ (geo-fenced e-lock systems) ដួង
  • ಉತ್ಪಾದನಾ ಸನ್ನದುಗಳನ್ನು ಸ್ವಯಂಚಾಲಿತವಾಗಿ ನವೀಕರಿಸಲಾಗುವುದು. ಲೇಬಲ್ ಅನುಮೋದನೆಗಳು. CL-5 (ಸಾಂದರ್ಭಿಕ ಸನ್ನದುಗಳು) ಮತ್ತು RVB ಸನ್ನದುಗಳು (ಐದು ವರ್ಷಗಳ ಅವಧಿಗೆ) ಆನ್‌ಲೈನ್‌ನಲ್ಲಿ ಸ್ವಯಂ ಘೋಷಣೆ ಮತ್ತು ಶುಲ್ಕ ಪಾವತಿಯ ಷರತಿಗೊಳಪಟ್ಟು, ಯಾವುದೇ ಹಸ್ತಕ್ಷೇಪವಿಲ್ಲದೆ deemed approval ವ್ಯವಸ್ಥೆಯಡಿ ಅನುಮೋದಿಸಲಾಗುವುದು. ಡಿಸ್ಟಿಲರಿಗಳು ಮತ್ತು ಬ್ರವರಿಗಳಿಗೆ 24 ಗಂಟೆಗಳ ಕಾರ್ಯಾಚರಣೆ ಮತ್ತು ರವಾನೆ ಮಾಡಲು ಅನುಮತಿ ನೀಡಲಾಗುತ್ತದೆ. ಬಿಯ‌ರ್ ಲೇಬಲ್‌ಗಳಲ್ಲಿ ಮಾಲ್ಟ್ ಮತ್ತು ಸಕ್ಕರೆ ಅಂಶವನ್ನು ಕಡ್ಡಾಯವಾಗಿ ನಮೂದಿಸುವ ಆಗತ್ಯತೆಯನ್ನು ರದ್ದುಗೊಳಿಸಲಾಗುವುದು.
  • ಮದ್ಯ ವಲಯದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ಡಿಸ್ಟಿಲರಿಗಳು ಮತ್ತು ಬೂವರಿಗಳು ಪ್ರವಾಸಿಗರಿಗೆ ಮದ್ಯ ಸವಿಯಲು ಮತ್ತು ತಮ್ಮ ಆವರಣದಲ್ಲಿ ತಯಾರಿಸಿದ ಉತ್ಪನ್ನಗಳನ್ನು ಪ್ರವಾಸಿಗರಿಗೆ ಮಾರಾಟ ಮಾಡಲು ಅವಕಾಶ ನೀಡಲಾಗುವುದು.
  • ಪ್ರಸಕ್ತ ಸಾಲಿನಲ್ಲಿ 1628 ಪ್ರಾಥಮಿಕ ಕೃಷಿ ಪತ್ತಿನ 건위였다 장원е (PACS) ಗಣಕೀಕರಣಗೊಳಿಸಲಾಗುವುದು.
  • ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಆಗುತ್ತಿರುವ ಆಹಾರ ಪದಾರ್ಥಗಳ ಗುಣಮಟ್ಟದ ಕುರಿತು ತನಿಖೆ ನಡೆಸಲು ಉನ್ನತ ಮಟ್ಟದ ಸಮಿತಿ ರಚನೆ.
  • ಲಾಭಾಂಶ ವಿತರಣೆಯಲ್ಲಿ ಪಾರದರ್ಶಕತೆ ಹೆಚ್ಚಿಸಲು FIST Application ಅಭಿವೃದ್ಧಿ,
  • 2015 ಕ್ಕಿಂತ ಮೊದಲಿನ ದಾಖಲೆಗಳನ್ನು ಡಿಜಿಟಲ್ ರೂಪಕ್ಕೆ ಪರಿವರ್ತಿಸಿ ‘ಇ-ಜನ್ಮ’ ಮೂಲಕ ಡಿಜಿಟಲ್ ಪ್ರಮಾಣಪತ್ರ ನೀಡಲಾಗುವುದು.
  • ಎಲ್ಲಾ ಇಲಾಖೆಗಳ ಕಟ್ಟಡಗಳ ವಿನ್ಯಾಸ ಮತ್ತು ಅಂದಾಜುಗಳಲ್ಲಿ ಏಕರೂಪತೆ ತರಲು ತಜ್ಞರ ಸಮಿತಿ ರಚನೆ ಮಾಡಲಾಗುವುದು,
  • ಕಂದಾಯ ಇಲಾಖೆಯ ಆಸ್ತಿಗಳನ್ನು ಡಿಜಿಟಲೀಕರಣಗೊಳಿಸುವುದರೊಂದಿಗೆ ಸಂರಕ್ಷಿಸಲು ರಿಕಾರ್ಡ್ ರೂಂ ನಿರ್ಮಾಣ ಮಾಡಲಾಗುವುದು.
  • ರಾಜ್ಯದಲ್ಲಿ ಹೂಡಿಕೆಗೆ ಪೂರಕವಾಗಲು ಏಕಗವಾಕ್ಷಿ ಪೋರ್ಟಲ್ ಅನ್ನು ಮೈಕ್ರೋಸಾಫ್ಟ್ ವತಿಯಿಂದ ಅಭಿವೃದ್ಧಿ.
  • ಕರ್ನಾಟಕ ನಿರಪರಾಧೀಕರಣ (ಉಪಬಂಧಗಳ ತಿದ್ದುಪಡಿ) ಅಧಿನಿಯಮ 2025ನ್ನು ಜಾರಿಗೆ ತಂದು 278 ಅನುಚ್ಛೇದಗಳನ್ನು ಕ್ರಿಮಿನಲ್ ಅಪರಾಧ ವ್ಯಾಪ್ತಿಯಿಂದ ಹೊರತುಪಡಿಸಲಾಗಿದೆ.
  • ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2 ನೀಡಿರುವ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸಲು ಆದ್ಯತೆ.
  • ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಿಂದ ನೀಡಲಾಗುವ ಕ್ಲಿಯರೆನ್ಸ್ ನವೀಕರಣ ಪ್ರಮಾಣಪತ್ರ ಮತ್ತು ಸಮಾಪನ ಪತ್ರದ ನವೀಕರಣ ಅವಧಿ 2 ರಿಂದ 5 ವರ್ಷಗಳಿಗೆ ಹೆಚ್ಚಳ,

2026-27ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಇಲಾಖೆಯಡಿ ಪ್ರಮುಖ ಹೊಸ ಶೈಕ್ಷಣಿಕ ಘೋಷಣೆಗಳು ಕೆಳಕಂಡಂತಿದೆ.

  • ಒಟ್ಟು 187 ಹೊಸ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳ ಪ್ರಾರಂಭ,
  • 46 ಹೊಸ ವಸತಿ ಶಾಲೆಗಳು ಮತ್ತು 29 ಹೊಸ CBSE ಪಠ್ಯಕ್ರಮದ ವಸತಿ ಶಾಲೆಗಳ ಆರಂಭ.
  • 56 ವಸತಿ ಶಾಲೆಗಳನ್ನು ಪಿ.ಯು ಕಾಲೇಜನ್ನಾಗಿ ಉನ್ನತೀಕರಣ.
  • 30 ವಸತಿ ಶಾಲೆಗಳಿಗೆ ಸ್ವಂತ ಕಟ್ಟಡ ನಿರ್ಮಾಣ
  • 14 ಉದ್ಯೋಗಸ್ಥ ಮಹಿಳೆಯರ ವಸತಿನಿಲಯ ಪ್ರಾರಂಭ.
  • 8 ವಸತಿ ಶಾಲೆಗಳನ್ನು K-CET/JBE/NEET ಪರೀಕ್ಷೆಗಳಿಗೆ ತರಬೇತಿ ನೀಡಲು Centre of Excellance ನ್ನಾಗಿ ಉನ್ನತೀಕರಣ.
  • ಹಿಂದುಳಿದ ವರ್ಗದ 50 ವಿದ್ಯಾರ್ಥಿನಿಲಯಗಳಿಗೆ ಸ್ವಂತ ಕಟ್ಟಡ ನಿರ್ಮಾಣ.
  • ಅಲ್ಪಸಂಖ್ಯಾತರ ಇಲಾಖೆಯ 31 ಮಹಿಳಾ ಪಿ.ಯು ಕಾಲೇಜು ಪದವಿ ಕಾಲೇಜನ್ನಾಗಿ ಉನ್ನತೀಕರಣ. ಸವಣೂರಲ್ಲಿ ಒಂದು ಹೊಸ ಮಹಿಳಾ ಪಿ.ಯು. ಕಾಲೇಜು ಪ್ರಾರಂಭ.

 

1 thought on “ಕರ್ನಾಟಕ ಬಜೆಟ್ 2026–27 : ಆಯವ್ಯಯದ ಮುಖ್ಯಾಂಶಗಳು”

Leave a Comment