Telegram Join My Telegram WhatsApp Join My WhatsApp

HESCOM ನೇಮಕಾತಿ 2026 – 388 ಟ್ರೈನೀ ಹುದ್ದೆಗಳಿಗೆ ಅರ್ಜಿ ಅಹ್ವಾನಿಸಲಾಗಿದೆ.

HESCOM ನೇಮಕಾತಿ 2026 – 388 ಟ್ರೈನೀ ಹುದ್ದೆಗಳಿಗೆ ಅರ್ಜಿ ಅಹ್ವಾನಿಸಲಾಗಿದೆ.

ಪರಿಚಯ

ಹುಬ್ಬಳ್ಳಿ ಎಲೆಕ್ಟ್ರಿಸಿಟಿ ಸಪ್ಲೈ ಕಂಪನಿ ಲಿಮಿಟೆಡ್ (HESCOM) ಕರ್ನಾಟಕ ರಾಜ್ಯದ ಪ್ರಮುಖ ವಿದ್ಯುತ್ ವಿತರಣಾ ಕಂಪನಿಗಳಲ್ಲಿ ಒಂದಾಗಿದೆ. ಇದು ಕರ್ನಾಟಕದ ಉತ್ತರ-ಪಶ್ಚಿಮ ಭಾಗದ ಹಲವು ಜಿಲ್ಲೆಗಳಿಗೆ ವಿದ್ಯುತ್ ವಿತರಣೆಯನ್ನು ಮಾಡುವ ಜವಾಬ್ದಾರಿಯನ್ನು ಹೊಂದಿದೆ. ಮನೆಗಳು, ಕೈಗಾರಿಕೆಗಳು, ಕೃಷಿ ಮತ್ತು ವಾಣಿಜ್ಯ ಕ್ಷೇತ್ರಗಳಿಗೆ ನಿರಂತರ ವಿದ್ಯುತ್ ಸರಬರಾಜು ಒದಗಿಸುವಲ್ಲಿ HESCOM ಮಹತ್ವದ ಪಾತ್ರ ವಹಿಸುತ್ತದೆ.

ಆಧುನಿಕ ಸಮಾಜದಲ್ಲಿ ವಿದ್ಯುತ್ ಅತ್ಯಂತ ಅಗತ್ಯವಾದ ಮೂಲಭೂತ ಸೌಲಭ್ಯವಾಗಿದೆ. ಬೆಳಕು, ಕೈಗಾರಿಕಾ ಕಾರ್ಯಗಳು, ಕೃಷಿ ನೀರಾವರಿ, ಶಿಕ್ಷಣ ಹಾಗೂ ಆರೋಗ್ಯ ಸೇವೆಗಳಿಗೆ ವಿದ್ಯುತ್ ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ HESCOM ಸಂಸ್ಥೆ ರಾಜ್ಯದ ಅಭಿವೃದ್ಧಿಗೆ ಪ್ರಮುಖವಾಗಿ ಸಹಕರಿಸುತ್ತದೆ.

ಸ್ಥಾಪನೆ ಮತ್ತು ಹಿನ್ನೆಲೆ

HESCOM ಸಂಸ್ಥೆಯನ್ನು 2002ರ ಜೂನ್ ತಿಂಗಳಲ್ಲಿ ಕರ್ನಾಟಕ ಸರ್ಕಾರ ಸ್ಥಾಪಿಸಿತು. ಮೊದಲು ಕರ್ನಾಟಕದಲ್ಲಿ ವಿದ್ಯುತ್ ಉತ್ಪಾದನೆ, ಪ್ರಸರಣ ಮತ್ತು ವಿತರಣೆಯ ಎಲ್ಲಾ ಕಾರ್ಯಗಳನ್ನು ಕರ್ನಾಟಕ ವಿದ್ಯುತ್ ಮಂಡಳಿ (KEB) ನಿರ್ವಹಿಸುತ್ತಿತ್ತು. ಆದರೆ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಮತ್ತು ವಿದ್ಯುತ್ ಸೇವೆಯನ್ನು ಉತ್ತಮಗೊಳಿಸಲು ಸರ್ಕಾರ ವಿದ್ಯುತ್ ಕ್ಷೇತ್ರದಲ್ಲಿ ಸುಧಾರಣೆಗಳನ್ನು ಮಾಡಿತು.

ಈ ಸುಧಾರಣೆಗಳ ಪ್ರಕಾರ ವಿದ್ಯುತ್ ವ್ಯವಸ್ಥೆಯನ್ನು ಮೂರು ಮುಖ್ಯ ಭಾಗಗಳಾಗಿ ವಿಭಜಿಸಲಾಯಿತು:

  • ವಿದ್ಯುತ್ ಉತ್ಪಾದನೆ

  • ವಿದ್ಯುತ್ ಪ್ರಸರಣ

  • ವಿದ್ಯುತ್ ವಿತರಣೆ

ಪ್ರಸರಣ ಕಾರ್ಯಗಳನ್ನು ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೋರೇಶನ್ ಲಿಮಿಟೆಡ್ (KPTCL) ಗೆ ನೀಡಲಾಯಿತು. ವಿತರಣಾ ಕಾರ್ಯಗಳನ್ನು ವಿವಿಧ ಪ್ರದೇಶಗಳಿಗಾಗಿ ಪ್ರತ್ಯೇಕ ಕಂಪನಿಗಳಿಗೆ ನೀಡಲಾಯಿತು. ಅವುಗಳಲ್ಲಿ ಒಂದಾಗಿ HESCOM ಸ್ಥಾಪನೆಯಾಯಿತು.

ಕೇಂದ್ರ ಕಚೇರಿ ಮತ್ತು ಕಾರ್ಯ ಪ್ರದೇಶ

HESCOM ಕಂಪನಿಯ ಮುಖ್ಯ ಕಚೇರಿ ಹುಬ್ಬಳ್ಳಿ (Hubballi) ನಗರದಲ್ಲಿದೆ. ಈ ಸಂಸ್ಥೆ ಕರ್ನಾಟಕದ ಉತ್ತರ-ಪಶ್ಚಿಮ ಭಾಗದಲ್ಲಿರುವ ಹಲವು ಜಿಲ್ಲೆಗಳಿಗೆ ವಿದ್ಯುತ್ ಸರಬರಾಜು ಮಾಡುತ್ತದೆ.

HESCOM ಸೇವೆ ನೀಡುವ ಪ್ರಮುಖ ಜಿಲ್ಲೆಗಳು:

  1. ಧಾರವಾಡ

  2. ಗದಗ

  3. ಹಾವೇರಿ

  4. ಉತ್ತರ ಕನ್ನಡ

  5. ಬೆಳಗಾವಿ

  6. ಬಾಗಲಕೋಟೆ

  7. ವಿಜಯಪುರ

ಈ ಜಿಲ್ಲೆಗಳಲ್ಲಿ ನಗರ ಪ್ರದೇಶಗಳ ಜೊತೆಗೆ ಗ್ರಾಮೀಣ ಪ್ರದೇಶಗಳಿಗೂ ವಿದ್ಯುತ್ ವಿತರಣೆ ಮಾಡಲಾಗುತ್ತದೆ. ವಿಶೇಷವಾಗಿ ಕೃಷಿ ಪ್ರದೇಶಗಳಿಗೆ ವಿದ್ಯುತ್ ಪೂರೈಕೆ ಬಹಳ ಮುಖ್ಯವಾಗಿದೆ.

ಸಂಘಟನಾ ರಚನೆ

HESCOM ಸಂಸ್ಥೆ ಸರ್ಕಾರದ ನಿಯಂತ್ರಣದಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಸಂಸ್ಥೆಯ ಮುಖ್ಯಸ್ಥರನ್ನು ಮ್ಯಾನೇಜಿಂಗ್ ಡೈರೆಕ್ಟರ್ (Managing Director) ಎಂದು ಕರೆಯಲಾಗುತ್ತದೆ. ಇವರ ಮಾರ್ಗದರ್ಶನದಲ್ಲಿ ಸಂಸ್ಥೆಯ ಎಲ್ಲಾ ಕಾರ್ಯಗಳು ನಡೆಯುತ್ತವೆ.

ಸಂಸ್ಥೆಯನ್ನು ಸುಗಮವಾಗಿ ನಿರ್ವಹಿಸಲು ವಿವಿಧ ವಿಭಾಗಗಳಾಗಿ ಹಂಚಲಾಗಿದೆ. ಪ್ರತಿ ವಿಭಾಗದಲ್ಲಿ ಇಂಜಿನಿಯರ್‌ಗಳು, ತಾಂತ್ರಿಕ ಸಿಬ್ಬಂದಿ ಮತ್ತು ಆಡಳಿತ ಸಿಬ್ಬಂದಿ ಕೆಲಸ ಮಾಡುತ್ತಾರೆ.

ಮುಖ್ಯ ವಿಭಾಗಗಳು:

  • ಕಾರ್ಯಾಚರಣೆ ಮತ್ತು ನಿರ್ವಹಣೆ

  • ಯೋಜನೆ ಮತ್ತು ಅಭಿವೃದ್ಧಿ

  • ಹಣಕಾಸು ಮತ್ತು ಲೆಕ್ಕಪತ್ರ

  • ಗ್ರಾಹಕ ಸೇವೆ

  • ತಾಂತ್ರಿಕ ಸೇವೆಗಳು

  • ಮಾನವ ಸಂಪನ್ಮೂಲ

ಈ ಎಲ್ಲಾ ವಿಭಾಗಗಳು ಒಟ್ಟಾಗಿ ವಿದ್ಯುತ್ ವಿತರಣೆಯನ್ನು ಸುಗಮವಾಗಿ ನಡೆಸಲು ಸಹಕರಿಸುತ್ತವೆ.

Hubli Electricity Supply Company Limited (ಹೆಸ್ಕಾಂ) ಕರ್ನಾಟಕ ರಾಜ್ಯ ಸರ್ಕಾರದ ಪ್ರಮುಖ ವಿದ್ಯುತ್ ವಿತರಣಾ ಸಂಸ್ಥೆಯಾಗಿದ್ದು, ಹುಬ್ಬಳ್ಳಿ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ವಿದ್ಯುತ್ ಸರಬರಾಜು ಮತ್ತು ನಿರ್ವಹಣೆಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ. 2026ನೇ ಸಾಲಿನ ನೇಮಕಾತಿ ಅಧಿಸೂಚನೆಯ ಮೂಲಕ ಹೆಸ್ಕಾಂ 388 ಟ್ರೈನೀ (ಐಟಿಐ ಎಲೆಕ್ಟ್ರಿಷಿಯನ್) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಸರ್ಕಾರಿ ಉದ್ಯೋಗದ ಕನಸು ಹೊಂದಿರುವ ಐಟಿಐ ವಿದ್ಯಾರ್ಹತೆಯ ಅಭ್ಯರ್ಥಿಗಳಿಗೆ ಇದು ಅತ್ಯುತ್ತಮ ಅವಕಾಶವಾಗಿದೆ. ಹುಬ್ಬಳ್ಳಿ – ಕರ್ನಾಟಕ ಸರ್ಕಾರದ ಕ್ಷೇತ್ರದಲ್ಲಿ ವೃತ್ತಿ ನಿರ್ಮಿಸಲು ಬಯಸುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು.

2026-27 ನೇ ವರ್ಷದ ಅವಧಿಗಾಗಿ ಐಟಿಐ ಇಲೆಕ್ಟಿಶಿಯನ್ ವೃತ್ತಿ ತರಬೇತಿಗಾಗಿ 388 ಶಿಶುಕ್ಷುಗಳನ್ನು ಆಯ್ಕೆ ಮಾಡಲು ಅರ್ಜಿಗಳನ್ನು ಕರೆಯಲಾಗಿದ್ದು, ಅರ್ಹ ಅಭ್ಯರ್ಥಿಗಳಿಗೆ ಬೇಕಾಗುವ ಅರ್ಹತೆಗಳ ವಿವರ ಹಾಗೂ ಶಿಶುಕ್ಷುಗಳು ಸಲ್ಲಿಸಬೇಕಾಗುವ ಅರ್ಜಿಯ ನಮೂನೆ ಹಾಗೂ ಸಂಬಂಧಿತ ಲಗತ್ತುಗಳು ಹೆಸ್ಕಾಂನ ವೆಬ್ ಸೈಟ್: www.hescom.karnataka.gov.in . ಭರ್ತಿ ಮಾಡಿದ ಅರ್ಜಿಗಳನ್ನು, ಲಗತ್ತುಗಳೊಂದಿಗೆ ಕಾರ್ಯನಿರ್ವಾಹಕ ಇಂಜಿನಿಯರರು(ವಿ), ಕೈಗಾರಿಕಾ ತರಬೇತಿ ಕೇಂದ್ರ (ಐ.ಟಿ.ಸಿ), ಹೆಸ್ಕಾಂ, ವಿದ್ಯುತ್ ನಗರ, ಕಾರವಾರ ರಸ್ತೆ, ಹುಬ್ಬಳ್ಳಿ – 580024, ಇವರಿಗೆ ದಿನಾಂಕ: 09.03.2026 ರ ಸಂಜೆ 4.00 ಘಂಟೆಯ ಒಳಗೆ ಖುದ್ದಾಗಿ ಅಥವಾ ಅಂಚೆ ಮೂಲಕ ಕಳುಹಿಸಬೇಕು.

ಹೆಸ್ಕಾಂನಲ್ಲಿ 2026-27 ಸಾಲಿನ ಶಿಶಿಕ್ಷು ತರಬೇತಿಯ ವಿವರಣಾ ಪತ್ರ

ಪ್ರಸ್ತಾವನೆ

1. ಕರ್ನಾಟಕ ಸರ್ಕಾರದ ಅಪ್ರೆಂಟಿಸ್ ಕಾಯ್ದೆ-1961 ರನ್ವಯ ಐ.ಟಿ.ಐ (ಎರಡು ವರ್ಷ) ಪಾಸಾದ ಅಭ್ಯರ್ಥಿಗಳಿಗೆ ಒಂದು ವರ್ಷ ಅವಧಿಯ ಶಿಶಿಕ್ಷು ತರಬೇತಿ ಹೆಸ್ಕಾಂನಲ್ಲಿ ನೀಡಲಾಗುವುದು.

2. ಐ.ಟಿ.ಐ(ಇಲೆಕ್ನಿಶಿಯನ್) ವೃತ್ತಿಯಲ್ಲಿ ಉತ್ತೀರ್ಣರಾಗಿ NCVT/SCVT-PROVISIONAL NATIONAL TRADE CERTIFICATE ಅಂಕ ಪಟ್ಟಿಯನ್ನು ಹೊಂದಿದ 338 ಸಂಖ್ಯೆಯ ಸೂಕ್ತ ಅಭ್ಯರ್ಥಿಗಳನ್ನು 2026-27 ಸಾಲಿನಲ್ಲಿ ಆಯ್ಕೆ ಮಾಡಿ ನಮ್ಮ ಇಲಾಖೆಯಿಂದ ಒಂದು ವರ್ಷದ ಶಿಶಿಕ್ಷು ತರಬೇತಿಯನ್ನು ನೀಡಲಾಗುತ್ತದೆ.

ಯೋಜನೆಯ ಉದ್ದೇಶಗಳು:

ಎರಡು ವರ್ಷದ ಐ.ಟಿ.ಐ ವೃತ್ತಿಯನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಅವರ ವೃತ್ತಿಯಲ್ಲಿ ಹೆಚ್ಚಿನ ಜ್ಞಾನವನ್ನು ಪಡೆಯಲು ಅನುಕೂಲವಾಗುವ ಉದ್ದೇಶದಿಂದ ಮಾಸಿಕ ಶಿಶುಕ್ಷು ವೇತನ (Stipend) ರೂ. 9,600/- ಸಹಿತ ಶಿಶಿಕ್ಷು ತರಬೇತಿಯನ್ನು ನೀಡಲಾಗುತ್ತದೆ.

ಹೆಸ್ಕಾಂನ ಕಾರ್ಯ ಮತ್ತು ಪಾಲನಾ ವಿಭಾಗ/ ಮಾಪಕ ತಪಾಸಣಾ ವಿಭಾಗ/ 33 ಕೆವಿ ಉಪ-ಕೇಂದ್ರ ಮತ್ತು ಲೈನ್ ಗಳ ವಿಭಾಗಗಳ ವ್ಯಾಪ್ತಿಗೆ ಒಳಪಡುವ ಕಛೇರಿಗಳಿಗೆ ಪ್ರಾಯೋಗಿಕ ತರಬೇತಿಗಾಗಿ ಕೈಗಾರಿಕಾ ತರಬೇತಿ ಕೇಂದ್ರದಿಂದ ನಿಯೋಜಿಸಲಾಗುವುದು.

HESCOM ನೇಮಕಾತಿ 2026 – 388 ಟ್ರೈನೀ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಹೆಸ್ಕಾಂನ ವೆಬ್ ಸೈಟ್: www.hescom.karnataka.gov.in

ಯಾರು ಅರ್ಹರು:

1. ಎರಡು ವರ್ಷದ ಐ.ಟಿ.ಐ (ಇಲೆಕ್ನಿಶಿಯನ್) ವೃತ್ತಿಯಲ್ಲಿ ಉತ್ತೀರ್ಣರಾಗಿ NCVT/SCVT – PROVISIONAL NATIONAL TRADE CERTIFICATE ಅಂಕ ಪಟ್ಟಿಯನ್ನು ಹೊಂದಿರುವ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು.

2. ಅಭ್ಯರ್ಥಿಗಳು ಯಾವುದಾದರು ಸರ್ಕಾರಿ/ಸರ್ಕಾರಿ ಅನುದಾನಿತ/ಸರ್ಕಾರದಿಂದ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ ಐ.ಟಿ.ಐಯನ್ನು ಪೂರ್ಣಗೊಳಿಸಿರಬೇಕು.

3. ಇಲೆಕ್ನಿಶಿಯನ್ ವೃತ್ತಿ ಹೊರತುಪಡಿಸಿ ಬೇರೆ ಯಾವುದೇ ವೃತ್ತಿಯನ್ನು ಪರಿಗಣಿಸಲಾಗುವುದಿಲ್ಲ.

4. ಈಗಾಗಲೇ ಶಿಶುಕ್ಷು ತರಬೇತಿಯನ್ನು ಪೂರ್ಣಗೊಳಿಸಿದ ಅಥವಾ ತರಬೇತಿ ಹೊಂದುತ್ತಿರುವ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. ಒಂದು ವೇಳೆ ಪುನರಾವರ್ತಿತ ಎಂದು ಕಂಡು ಬಂದಲ್ಲಿ ಅಂತಹ ಅಭ್ಯರ್ಥಿಗಳ ನೋಂದಣಿಯನ್ನು ವಜಾಗೊಳಿಸಲಾಗುವುದು.

5. ಪ್ರವೇಶ ಪಡೆಯಲು ಇಚ್ಚಿಸುವ ಅಭ್ಯರ್ಥಿಯ ವಯಸ್ಸು 09.03.2026 ಕ್ಕೆ 25 ವರ್ಷಕ್ಕಿಂತ ಮೀರಿರಬಾರದು. ಪರಿಶಿಷ್ಟ ಜಾತಿ/ ಪಂಗಡದ ಅಭ್ಯರ್ಥಿಯ ವಯಸ್ಸು 09.03.2026 ಕ್ಕೆ 30 ವರ್ಷಕ್ಕಿಂತ ಮೀರಿರಬಾರದು.

6. ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಕನ್ನಡ ಭಾಷೆಯನ್ನು ಒಂದು ವಿಷಯವಾಗಿ ತೆಗೆದುಕೊಂಡಿದ್ದು ಮತ್ತು ಕನ್ನಡದಲ್ಲಿ ಓದಲು ಹಾಗೂ ಬರೆಯಲು ತಿಳಿದಿರಬೇಕು.

ಶಿಶಿಕ್ಷು ತರಬೇತಿಗಾಗಿ ಅರ್ಜಿ ಸಲ್ಲಿಸುವ ವಿಧಾನ:

1. ಪೂರ್ಣ ವಿವರವಿರುವ ಎ-4 ಸೈಜಿನ ಹಾಳೆಯಲ್ಲಿ ಸ್ವಯಂ ಲಿಖಿತ ಅಥವಾ ಬೆರಳಚ್ಚು ಮಾಡಿದ ನಿಗದಿತ ನಮೂನೆಯಲ್ಲಿರುವ (ಲಗತ್ತಿಸಲಾಗಿದೆ) ಅರ್ಜಿಗಳನ್ನು ಸಾಮಾನ್ಯ ಅಭ್ಯರ್ಥಿಗಳು ರೂ.100/-ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳು ರೂ. 50/- ಮೊತ್ತದ ಇಂಡಿಯನ್ ಪೊಸ್ಟಲ್ ಅರ್ಡರನ್ನು “ಆರ್ಥಿಕ ಸಲಹೆಗಾರರು, ಹುವಿಸಕಂನಿ, ಹುಬ್ಬಳ್ಳಿ” ಇವರ ಹೆಸರಿನಲ್ಲಿ ಖರೀದಿಸಿ ಅರ್ಜಿಯೊಂದಿಗೆ ಲಗತ್ತಿಸಬೇಕು ಹಾಗೂ ಲಕೋಟೆಯ ಮೇಲೆ “ಇಲೆಕ್ನಿಶಿಯನ್ ವೃತ್ತಿಯ ಶಿಶುಕ್ಷು ತರಬೇತಿಗಾಗಿ ಅರ್ಜಿ” ಎಂದು ನಮೂದಿಸಬೇಕು.

2. ಮೇಲೆ ತಿಳಿಸಿದ ಮೊತ್ತದ ಇಂಡಿಯನ್ ಪೊಸ್ಟಲ್ ಆರ್ಡರನ್ನು ಹೊರತು ಪಡಿಸಿ, ಬ್ಯಾಂಕ್ ಡಿಮಾಂಡ ಡ್ರಾಫ್ಟ್ (DD) ಅಥವಾ ನಗದನ್ನು ಲಗತ್ತಿಸಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

3. ಅಭ್ಯರ್ಥಿಗಳು ಕ್ರ.ಸಂ. V ರಲ್ಲಿ ವಿವರಿಸಿದಂತೆ ಅಪ್ರೆಂಟಿಸ್‌ಶಿಪ್ ಪೋರ್ಟಲ್ www.apprenticeshipindia.gov.in ನಲ್ಲಿ ನೋಂದಾಯಿಸಬೇಕು. ನಂತರ Hubli Electricity Supply Company Ltd. ನ್ನು ಆಯ್ಕೆ ಮಾಡಬೇಕು.

4. ಅಪ್ರೆಂಟಿಸ್‌ಶಿಪ್ ಪೋರ್ಟಲ್ಲಿನಲ್ಲಿ ನೋಂದಣಿ ಮಾಡಿಕೊಂಡ ಪ್ರತಿಯನ್ನು ಅರ್ಜಿಯ ಜೊತೆಗೆ ಲಗತ್ತಿಸಬೇಕು.

5. ಅರ್ಜಿಯೊಂದಿಗೆ ಈ ಕೆಳಗಿನ ದಾಖಲಾತಿಗಳ ನಕಲು ಪ್ರತಿಯನ್ನು ಲಗತ್ತಿಸಬೇಕು.

  •  ಸ್ವಯಂ ದೃಢೀಕರಿಸಲ್ಪಟ್ಟ ಎಸ್.ಎಸ್.ಎಲ್.ಸಿ. ಅಂಕಪಟ್ಟಿ
  •  ಸ್ವಯಂ ದೃಢೀಕರಿಸಲ್ಪಟ್ಟ ಇಲೆಕ್ನಿಶಿಯನ್ ವೃತ್ತಿಯಲ್ಲಿ ಎರಡು ವರ್ಷದ ಕೋರ್ಸಿನ ಐ.ಟಿ.ಐ ಅಂಕಪಟ್ಟಿ,
  •  ಪತ್ರಿಕಾ ಪ್ರಕಟಣೆಗೊಂಡ ದಿನಾಂಕದ ನಂತರದ ಸ್ವಯಂ ಧೃಡೀಕರಿಸಲ್ಪಟ್ಟ ಸರಕಾರಿ ಆಸ್ಪತ್ರೆಯ ವೈದ್ಯರಿಂದ ದೈಹಿಕ ಸಾಮರ್ಥ್ಯ ಪ್ರಮಾಣ ಪತ್ರ
  •  ಸ್ವಯಂ ದೃಢೀಕರಿಸಲ್ಪಟ್ಟ ವರ್ಗ/ಸಮುದಾಯದ ಪ್ರಮಾಣ ಪತ್ರ (ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಕ್ಕೆ ಅನ್ವಯಿಸಿದರೆ ಮಾತ್ರ)
  •  ಆಧಾರ ಕಾರ್ಡ,
  •  ಇತ್ತೀಚಿನ ಪಾಸಪೋರ್ಟ್ ಗಾತ್ರದ ಒಂದು ಭಾವ ಚಿತ್ರವನ್ನು ಅರ್ಜಿಗೆ ಲಗತ್ತಿಸಬೇಕು.

6. ಮೇಲೆ ತಿಳಿಸಿರುವ ದಾಖಲಾತಿಗಳಲ್ಲಿ ಯಾವುದಾದರೂ ಒಂದು ದಾಖಲಾತಿಯನ್ನು ಸಲ್ಲಿಸದಿದ್ದಲ್ಲಿ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ.

7. ಪೂರ್ಣ ವಿವರವಿಲ್ಲದ (ನಿಗದಿತ ನಮೂನೆಯಲ್ಲಿಲ್ಲದ ಅರ್ಜಿಗಳು) ಅರ್ಜಿಗಳನ್ನು ತಿರಸ್ಕರಿಸಲಾಗುವುದು.

8. ಭರ್ತಿ ಮಾಡಿದ ಅರ್ಜಿಗಳನ್ನು ಕಾರ್ಯನಿರ್ವಾಹಕ ಅಭಿಯಂತರರು(ವಿ), ಕೈಗಾರಿಕಾ ತರಬೇತಿ ಕೇಂದ್ರ, (ITC), ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ, ವಿದ್ಯುತ್‌ ನಗರ, ಕಾರವಾರ ರಸ್ತೆ, ಹುಬ್ಬಳ್ಳಿ-580024 ರವರ ಕಛೇರಿಗೆ ದಿನಾಂಕ: 09.03.2026 ರ ಸಂಜೆ 4 ಘಂಟೆಯೊಳಗಾಗಿ ಅಂಚೆಯ ಮೂಲಕ ಕಳುಹಿಸಬೇಕು.

9. ಯಾವುದೇ ಕಾರಣಕ್ಕೂ ಪೋಸ್ಟಲ್ ಆರ್ಡ‌ರ್ ಗಳನ್ನು ವಾಪಸ್ ಮಾಡಲಾಗುವುದಿಲ್ಲ ಮತ್ತು ಶಿಫಾರಸ್ಸು ತರುವ ಅಭ್ಯರ್ಥಿಗಳ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಯಾವುದೇ ರೀತಿಯ ಪತ್ರ ವ್ಯವಹಾರಗಳಿಗೆ ಆಸ್ಪದವಿರುವುದಿಲ್ಲ.

ಶಿಶಿಕ್ಷು ತರಬೇತಿಗಾಗಿ ಅಪ್ರೆಂಟಿಸ್‌ಶಿಪ್ ಪೋರ್ಟಲ್ಲಿನಲ್ಲಿ ನೋಂದಣಿ ಮಾಡುವ ವಿಧಾನ:

1. ಅಭ್ಯರ್ಥಿಗಳು ಅಪ್ರೆಂಟಿಸ್‌ಶಿಪ್ ಪೋರ್ಟಲ್ www.apprenticeshipindia.gov.in ನಲ್ಲಿ ಇರುವ ಮಾರ್ಗಸೂಚಿ ವಿಡಿಯೋಗಳಲ್ಲಿ (Instructional Videos) ಸೂಚಿಸಿರುವ ಪ್ರಕಾರ ನೋಂದಾಯಿಸಬೇಕು. ನಂತರ Hubli Electricity Supply Company Ltd. 2 6 .

2. ಅಪ್ರೆಂಟಿಸ್‌ಶಿಪ್ ಪೋರ್ಟಲ್ಲಿನಲ್ಲಿ ನೋಂದಾಯಿಸಿಕೊಂಡು Hubli Electricity Supply Company Ltd. ಅನ್ನು ಆಯ್ಕೆ ಮಾಡಲು ದಿನಾಂಕ: 02.03.2026 ಕೊನೆಯ ದಿನವಾಗಿರುತ್ತದೆ.

3. ಅಪ್ರೆಂಟಿಸ್‌ಶಿಪ್ ಪೋರ್ಟಲ್ಲಿನಲ್ಲಿ ನೋಂದಾಯಿಸಿ, Hubli Electricity Supply Company Ltd. ಅನ್ನು ಆಯ್ಕೆ ಮಾಡದೇ ಇರುವ ಅಭ್ಯರ್ಥಿಗಳ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

4. ಅಪ್ರೆಂಟಿಸ್‌ಶಿಪ್ ಪೋರ್ಟಲ್ಲಿನಲ್ಲಿ ಅಭ್ಯರ್ಥಿಯು ಎಸ್.ಎಸ್.ಎಲ್.ಸಿ ಅಂಕ ಪಟ್ಟಿಯ ಪ್ರಕಾರ (ಹೆಸರು, ಹುಟ್ಟಿದ ದಿನಾಂಕ, ಇತ್ಯಾದಿ) ನೋಂದಾಯಿಸಿಕೊಳ್ಳಬೇಕು.

5. ಅಧಾರ ಕಾರ್ಡ ವಿವರ ಕೂಡ ಎಸ್.ಎಸ್.ಎಲ್.ಸಿ ಅಂಕ ಪಟ್ಟಿಯ ಪ್ರಕಾರ ಇದ್ದಾಗ ಮಾತ್ರ ನೋಂದಣಿಯು ಪೂರ್ಣಗೊಳ್ಳುತ್ತದೆ. ಸದರಿ ಪೋರ್ಟಲ್ಲಿನಲ್ಲಿ ಆಧಾರ ಪರಿಶೀಲನೆ ಪೂರ್ಣಗೊಳ್ಳದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

6. ಅಭ್ಯರ್ಥಿಗಳು ಈ ಅಧಿಸೂಚನೆಯನ್ನು ಓದಿಕೊಂಡು ಆಯ್ಕೆಯ ಅರ್ಹತೆ ಮಾನದಂಡಗಳನ್ನು ತಿಳಿದುಕೊಳ್ಳಬೇಕು.

7. ಅಭ್ಯರ್ಥಿಯು ನೋಂದಾಯಿಸಿದ ಮೊಬೈಲ್ ಸಂಖ್ಯೆಗೆ OTP ಬರುವುದು.

8. ಅಭ್ಯರ್ಥಿಗಳು ಪೋರ್ಟಲನಲ್ಲಿ ಸರಿಯಾದ ಮಾಹಿತಿಯನ್ನು ಒದಗಿಸುವುದು. ಒದಗಿಸಿರುವ ದಾಖಲೆಗಳನ್ನು ತಾತ್ಕಾಲಿಕ ಆಯ್ಕೆಯ ಸಮಯದಲ್ಲಿ ಪರಿಶೀಲಿಸಲಾಗುವುದು.

9. ಆನ್‌ಲೈನ್‌ನಲ್ಲಿ ನೋಂದಣಿ ಮಾಡುವಾಗ, ಸರಿಯಾದ ಮಾಹಿತಿಯನ್ನು ಭರ್ತಿ ಮಾಡಲು ವಿನಂತಿಸಲಾಗಿದೆ. ಆನ್‌ಲೈನ್ ನೋಂದಣಿ ನಮೂನೆಯಲ್ಲಿನ ಮಾಹಿತಿ ಮತ್ತು ಅಪಲೋಡ್ ಮಾಡಿರುವ ಪ್ರಮಾಣ ಪತ್ರದಲ್ಲಿನ ಮಾಹಿತಿಯಲ್ಲಿ ವ್ಯತ್ಯಾಸ ಕಂಡು ಬರಬಾರದು. ಆನ್‌ಲೈನ್ ನೋಂದಣಿ ನಮೂನೆಯಲ್ಲಿ ಸಲ್ಲಿಸಿದ ಮಾಹಿತಿಯನ್ನು ಮುಂದಿನ ಪ್ರಕ್ರಿಯೆಗಾಗಿ ಅಂತಿಮವಾಗಿ ತೆಗೆದುಕೊಳ್ಳಲಾಗುವುದು.

ತಾತ್ಕಾಲಿಕ ಆಯ್ಕೆ ಮತ್ತು ಪ್ರವೇಶ

1. ತಾತ್ಕಾಲಿಕವಾಗಿ ಆಯ್ಕೆಯಾದ ಮಾತ್ರಕ್ಕೆ ಅಭ್ಯರ್ಥಿಗಳಿಗೆ ಹೆಸ್ಕಾಂನಲ್ಲಿ ಶಿಶಿಕ್ಷು ತರಬೇತಿಗೆ ಪ್ರವೇಶ ಪಡೆಯಲು ಹಕ್ಕು ದೊರೆಯುವುದಿಲ್ಲ. ಪ್ರವೇಶ ಪಡೆಯುವ ಸಮಯದಲ್ಲಿ ಆಯ್ಕೆಗೊಂಡ ಪ್ರತಿಯೊಬ್ಬ ಅಭ್ಯರ್ಥಿಯು ಆನ್‌ಲೈನ್ ನಲ್ಲಿ ಅಪಲೋಡ್ ಮಾಡಿರುವ ಪ್ರಮಾಣ ಪತ್ರಗಳನ್ನು ಹಾಜರುಪಡಿಸಬೇಕು. ಪ್ರವೇಶ ಪಡೆಯುವವರೆಗೆ ಆಯ್ಕೆಯು ತಾತ್ಕಾಲಿಕವಾಗಿರುವುದು.

2. ವಿವಾದಾಸ್ಪದ ಸಂದರ್ಭಗಳಲ್ಲಿ ಹೆಸ್ಕಾಂನ ನಿರ್ಣಯವೇ ಅಂತಿಮವಾದದ್ದು ಹಾಗೂ ಈ ನಿರ್ಣಯಕ್ಕೆ ಎಲ್ಲಾ ಅಭ್ಯರ್ಥಿಗಳು ಬದ್ಧವಾಗಿರಬೇಕು. ಈ ಕಾರಣಕ್ಕಾಗಿ ಯಾವುದೇ ಪತ್ರ ವ್ಯವಹಾರಕ್ಕೆ ಅವಕಾಶ ಇರುವುದಿಲ್ಲ.

3. ಅಭ್ಯರ್ಥಿಗಳನ್ನು ಹೆಸ್ಕಾಂನ ಎಲ್ಲಾ ವೃತ್ತಗಳ ವ್ಯಾಪ್ತಿಗೆ ಒಳಪಡುವ ಕಛೇರಿಗಳಿಗೆ ನಿಯೋಜನೆ ಮಾಡಲಾಗುವುದು. ಆಯ್ಕೆ ಆದ ಕಾರ್ಯಸ್ಥಾನದ ಹೊರತು ಬೇರೊಂದು ಕಾರ್ಯಸ್ಥಾನಕ್ಕೆ ವರ್ಗಾಯಿಸಬೇಕೆಂಬ ಯಾವುದೇ ಕೋರಿಕೆಯನ್ನು ಪರಿಗಣಿಸಲಾಗುವುದಿಲ್ಲ.

4. ಒಂದು ವೇಳೆ ಅಭ್ಯರ್ಥಿಗಳು ಹೆಸ್ಕಾಂನ ವ್ಯಾಪ್ತಿಗೆ ಒಳಪಡುವ ಕಛೇರಿಗಳಲ್ಲಿ ನಿಯೋಜನೆಗೆ ಒಪ್ಪದೇ ಹೋದರೆ ಅಂತಹ ಅಭ್ಯರ್ಥಿಗಳಿಗೆ ತರಬೇತಿಯಲ್ಲಿ ಮುಂದುವರೆಯಲು ಅವಕಾಶ ನೀಡಲಾಗುವುದಿಲ್ಲ.

ವಿಬಿ-ಜಿ ರಾಮ್ ಜಿ ಯೋಜನೆ-2025

ವಿಶೇಷ ಸೂಚನೆ:

1. ಅಭ್ಯರ್ಥಿಗಳು ಸಲ್ಲಿಸಿದ ವಿವರಗಳಲ್ಲಿ (ಹೆಸರು, ಜನ್ಮ ದಿನಾಂಕ, ಜಾತಿ ಇತ್ಯಾದಿ) ಯಾವುದೇ ವ್ಯತ್ಯಾಸವಿರಬಾರದು.

2. ಅಭ್ಯರ್ಥಿಗಳೊಂದಿಗೆ ಆಯ್ಕೆ ಪ್ರಕ್ರಿಯೆಯ ವಿಚಾರವಾಗಿ ಯಾವುದೇ ಪತ್ರ/ಇ-ಮೇಲ್/ದೂರವಾಣಿ ಮೂಲಕ ವ್ಯವಹಾರ ಮಾಡಲಾಗುವುದಿಲ್ಲ. ಆಯ್ಕೆ ಪ್ರಕ್ರಿಯೆಯ ಪ್ರತಿಯೊಂದು ಸ್ಥರದ ವಿವರಗಳ ಬಗ್ಗೆ hescom.karnataka.gov.in → Documents → HRD & ITC Centre 2 2 .

ಎಚ್ಚರಿಕೆ:

1. ಅಭ್ಯರ್ಥಿಗಳು ಅರ್ಜಿ ತುಂಬುವಾಗ ಮೊದಲೇ ಎಲ್ಲಾ ಸೂಚನೆಗಳನ್ನು ಓದಿಕೊಂಡು ತಪ್ಪಾಗದಂತೆ ಎಚ್ಚರವಹಿಸಿ ಮಾಹಿತಿಯನ್ನು ಅಪಲೋಡ್ ಮಾಡಬೇಕು.

2. ಅರ್ಜಿಯಲ್ಲಿ ತುಂಬಿದ ಮಾಹಿತಿಯು ಪರಿಶೀಲನೆಯ ನಂತರ ಸುಳ್ಳು/ದೋಷ ಪೂರಿತ ಎಂದು ಕಂಡು ಬಂದಲ್ಲಿ ಅಭ್ಯರ್ಥಿಯ ತಾತ್ಕಾಲಿಕ ಆಯ್ಕೆಯ ನಂತರವೂ ಪ್ರವೇಶವನ್ನು ರದ್ದುಗೊಳಿಸುವ ಅಧಿಕಾರ ಹೆಸ್ಕಾಂಗೆ ಇದೆ.

3. ಈ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಪತ್ರ ವ್ಯವಹಾರ ಇರುವುದಿಲ್ಲ

4. ತಪ್ಪು ದಾಖಲೆಗಳೊಂದಿಗೆ ಪ್ರವೇಶ ಪಡೆದು. ಅಭ್ಯರ್ಥಿ ಕೊಟ್ಟ ಮಾಹಿತಿ ಸುಳ್ಳು ಎಂದು ಕಂಡು ಬಂದಲ್ಲಿ ಕೇವಲ ಪ್ರವೇಶವನ್ನು ವಜಾಗೊಳಿಸುವುದಲ್ಲದೇ ಅಂತಹ ಮಾಡಿಕೊಳ್ಳಲಾಗುವುದು.

Leave a Comment