Telegram Join My Telegram WhatsApp Join My WhatsApp

RDPR Karnataka Ombudsman ಹುದ್ದೆಗಳ ನೇಮಕಾತಿ 2026 – ಸಂಪೂರ್ಣ ಮಾಹಿತಿ

RDPR Karnataka Ombudsman  ಪರಿಚಯ:

ಓಂಬುಡ್ಸ್‌ಪರ್ಸನ್ ಎಂಬ ಪದವು ಮೂಲತಃ ಸ್ವೀಡಿಷ್, ಡ್ಯಾನಿಶ್ ಮತ್ತು ನಾರ್ವೇಜಿಯನ್ ಹಳೆಯ ನಾರ್ಸ್ ಪದ “ಉಂಬೂಸ್ಮೋರ್” ನಿಂದ ಬಂದಿದೆ, ಇದರ ಅರ್ಥ “ಪ್ರತಿನಿಧಿ”. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಇದನ್ನು ಕಾರ್ಯಗತಗೊಳಿಸಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಜೀವನೋಪಾಯದ ಮೂಲಗಳನ್ನು ಬಲಪಡಿಸಲು  ನೇಮಿಸಲಾಗಿದೆ. ಯೋಜನೆಯಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಲು ಮತ್ತು ಸಮಸ್ಯೆಗಳ ಅನುಷ್ಠಾನದ ಸಮಯದಲ್ಲಿ ಫಲಾನುಭವಿಗಳು ಮತ್ತು ಕಾರ್ಮಿಕರಿಗೆ ಪರಿಹಾರವನ್ನು ಒದಗಿಸಲು, ಯೋಜನೆಯಡಿಯಲ್ಲಿ ಸ್ವೀಕರಿಸಿದ ದೂರುಗಳನ್ನು ತನಿಖೆ ಮಾಡಲು ಮತ್ತು ವಿಲೇವಾರಿ ಮಾಡಲು 2005 ರ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕಾಯ್ದೆಯ ಸೆಕ್ಷನ್ 27 ರ ಉಪ-ವಿಭಾಗ (1) ರಲ್ಲಿ ನೀಡಲಾದ ಅಧಿಕಾರವನ್ನು ಚಲಾಯಿಸಲು ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಓಂಬುಡ್ಸ್‌ಪರ್ಸನ್‌ಗಳನ್ನು ನೇಮಿಸಲಾಗಿದೆ.

RDPR Karnataka Ombudsman ಮಹಾತ್ಮ ಗಾಂಧಿ ನರೇಗಾ ಅಧಿನಿಯಮ-2005ರ ಅನುಸೂಚಿ-1, ಪ್ಯಾರಾ 30ರನ್ವಯಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದ ದೂರುಗಳ ಕುರಿತು ವಿಚಾರಣೆ ನಡೆಸಿ, ಸೂಕ್ತ ಆದೇಶ ಹೊರಡಿಸಲು ಪ್ರತಿ ಜಿಲ್ಲೆಗೆ ಒಬ್ಬರು ಒಂಬುಡ್ರಮನ್ ರವರನ್ನು ನೇಮಕ ಮಾಡಲಾಗಿರುತ್ತದೆ. ಓಂಬುಡ್ಮನ್ ರವರು ಮಹಾತ್ಮಗಾಂಧಿ ನರೇಗಾ ಯೋಜನೆಯ ಅನುಷ್ಠಾನದಲ್ಲಿ ಈ ಕೆಳಕಂಡ ವಿಷಯಗಳಿಗೆ ಸಂಬಂಧಿಸಿದ ದೂರುಗಳನ್ನು ಸ್ವೀಕರಿಸಿ ವಿಚಾರಣೆ ನಡೆಸಿ ಆದೇಶ ಹೊರಡಿಸಬಹುದು. (ಕೇಂದ್ರ ಸರ್ಕಾರದ ಓಂಬುಡ್‌ಮನ್ ಮಾರ್ಗಸೂಚಿ 2014ರ ಪ್ಯಾರಾ-9)

  • ಗ್ರಾಮ ಸಭೆಗಳು ಮತ್ತು ಅವುಗಳಿಗೆ ಸಂಬಂಧಿಸಿದ ದಾಖಲೆಗಳ ನಿರ್ವಹಣೆ
  • ಕುಟುಂಬಗಳ ನೋಂದಣಿ ಮತ್ತು ಜಾಬ್ ಕಾರ್ಡ್ ವಿತರಣೆ
  • ಜಾಬ್ ಕಾರ್ಡ್ ಗಳನ್ನು ವಶದಲ್ಲಿಟ್ಟುಕೊಳ್ಳುವುದು.
  • ಕೆಲಸದ ಬೇಡಿಕೆ.
  • ಕೆಲಸದ ಬೇಡಿಕೆ ಅರ್ಜಿಗೆ ದಿನಾಂಕ ಸಹಿತವಾದ ಸ್ವೀಕೃತಿ ನೀಡುವುದು.
  • ಕೂಲಿ ಪಾವತಿ
  • ನಿರುದ್ಯೋಗ ಭತ್ಯೆ ಪಾವತಿ
  • ವಿಳಂಬ ಕೂಲಿ ಪಾವತಿ ಸಂದರ್ಭದಲ್ಲಿ ವಿಳಂಬ ಪರಿಹಾರ ಪಾವತಿಸುವುದು
  • ಲಿಂಗ ತಾರತಮ್ಯ
  • ಕಾಮಗಾರಿ ಸ್ಥಳದ ಸೌಲಭ್ಯಗಳು
  • ಕಾಮಗಾರಿಯ ಅಳತೆ
  • ಕಾಮಗಾರಿಯ ಗುಣಮಟ್ಟ
  • ಕೂಲಿಕಾರರ ಬದಲಾಗಿ ಯಂತ್ರಗಳ ಬಳಕೆ
  • ಗುತ್ತಿಗೆದಾರರ ಬಳಕೆ
  • ಬ್ಯಾಂಕ್ ಖಾತೆಗಳ ನಿರ್ವಹಣೆ
  • ಹಾಜರಾತಿ ಪಟ್ಟಿಗಳ ಪರಿಶೀಲನೆ
  • ಯೋಜನೆಗೆ ಸಂಬಂಧಿಸಿದ ದಾಖಲಾತಿಗಳ ಪರಿಶೀಲನೆ
  • ಅನುದಾನ ಬಳಕೆ
  • ಅನುದಾನ ಬಿಡುಗಡೆ
  • ಸಾಮಾಜಿಕ ಪರಿಶೋಧನೆಯಲ್ಲಿ ಗುರುತಿಸಲಾದ ಯಾವುದೇ ರೀತಿಯ ಅಕ್ರಮಗಳು
  • ದಾಖಲಾತಿಗಳ ನಿರ್ವಹಣೆ
  • ಕಾಯ್ದೆ ಮತ್ತು ಅನುಸೂಚಿಗಳಲ್ಲಿ ಖಾತರಿ ಪಡಿಸಲಾದ ಯಾವುದೇ ಹಕ್ಕುಗಳ ನಿರಾಕರಣೆಒಂಬುಡ್‌ಮನ್ ರವರು ತಾವು ಹೊರಡಿಸಿದ ಆದೇಶಗಳನ್ನು ಜಿಲ್ಲಾ ಕಾರ್ಯಕ್ರಮ ಸಮನ್ವಯಾಧಿಕಾರಿ ಮತ್ತು ಯೋಜನೆ ಅನುಷ್ಠಾನದ ರಾಜ್ಯ ನೋಡಲ್ ಅಧಿಕಾರಿಗಳಿಗೆ
    ಸಲ್ಲಿಸಬೇಕು. (ಕೇಂದ್ರ ಸರ್ಕಾರದ ಓಂಬುಡ್ಸ್ ಮನ್ ಮಾರ್ಗಸೂಚಿ 2014ರ ಪ್ಯಾರಾ -8.1 (vii)).
  • ಓಂಬುಡ್‌ಮನ್ ರವರು ಆದೇಶ ಹೊರಡಿಸಿದ 15 ದಿನಗಳೊಳಗಾಗಿ, ಆದೇಶದಿಂದ ಬಾಧಿತರಾದ ವ್ಯಕ್ತಿಗಳು ಓಂಬುಡ್ಸ್ ಮನ್ ಮೇಲ್ಮನವಿ ಪ್ರಾಧಿಕಾರದ ಮುಂದೆ ಲಿಖಿತವಾಗಿ ಮೇಲ್ಮನವಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. (ಕೇಂದ್ರ ಸರ್ಕಾರದ ಓಂಬುಡ್ಸ್ ಮನ್ ಮಾರ್ಗಸೂಚಿ 2014ರ ಪ್ಯಾರಾ – 13.4.8)

RDPR Karnataka Ombudsman ಹುದ್ದೆಗಳ ನೇಮಕಾತಿ 2026:

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನದ ಸಂಬಂಧದಲ್ಲಿ ಸ್ವೀಕೃತವಾಗುವ ದೂರುಗಳ ವಿಲೇವಾರಿ ಮತ್ತು ಕುಂದುಕೊರತೆಗಳ ನಿವಾರಣೆಗಾಗಿ ಈ ಕೆಳಕಂಡ ಜಿಲ್ಲೆಗಳಲ್ಲಿ  ಒಂಬುಡ್ಸಪರ್ಸನ್ಸ್ ರವರ ಹುದ್ದೆಗಳನ್ನು ಆಯ್ಕೆ ಮೂಲಕ ತುಂಬಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

RDPR Karnataka Ombudsman ಹುದ್ದೆ ಖಾಲಿಯಿರುವ / ಖಾಲಿಯಾಗಲಿರುವ
ಜಿಲ್ಲೆಗಳು
ಬಾಗಲಕೋಟೆ, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಬೀದರ್,
ಚಿತ್ರದುರ್ಗ, ದಾವಣಗೆರೆ, ಗದಗ, ಹಾಸನ, ಕೊಪ್ಪಳ, ಕೋಲಾರ, ಮೈಸೂರು ಮತ್ತು ಶಿವಮೊಗ್ಗ.

RDPR Karnataka Ombudsman ಅರ್ಹತೆಗಳು:

1.ಈ ಕೆಳಕಂಡ ಯಾವುದಾದರೊಂದು ಕ್ಷೇತ್ರದಲ್ಲಿ ಕನಿಷ್ಠ 10 ವರ್ಷಗಳ ಸೇವಾನುಭವ ಹೊಂದಿರಬೇಕಾಗಿರುತ್ತದೆ.

ಅ) ಸಾರ್ವಜನಿಕ ಆಡಳಿತ ಆ) ಕಾನೂನು ಇ) ಶೈಕ್ಷಣಿಕ ಕ್ಷೇತ್ರ ಈ) ಸಮಾಜ ಸೇವೆ ಉ) ಮ್ಯಾನೇಜ್‌ಮೆಂಟ್

2.ಸಾರ್ವಜನಿಕರೊಂದಿಗೆ/ಸಮುದಾಯದ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸಿದ ಅರ್ಹತೆಯಾಗಿರುತ್ತದೆ. ಅನುಭವವು ಒಂದು ಕಡ್ಡಾಯ

3. ಅ) ಕ್ರಿಮಿನಲ್ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದೀರಾ/ಆರೋಪ ಪಟ್ಟಿ ದಾಖಲಾಗಿದೆಯೇ? ಆ) ಇಲಾಖಾ ವಿಚಾರಣೆಯಲ್ಲಿ ದಂಡನೆಗೆ ಒಳಪಟ್ಟಿರುವಿರೇ?/ಯಾವುದೇ ಇಲಾಖಾ ವಿಚಾರಣೆ ಬಾಕಿ ಇದೆಯೇ? ಇ. ಯಾವುದೇ ರಾಷ್ಟ್ರೀಯ / ರಾಜಕೀಯ ಪಕ್ಷದ ಸದಸ್ಯರಾಗಿರಬಾರದು ಈ) ಯಾವುದೇ ನಿಷೇಧಿತ ಸಂಘ ಸಂಸ್ಥೆಯ ಸದಸ್ಯನಾಗಿರಬಾರದು (ಅ ಯಿಂದ ಈವರೆಗೂ ಪಬ್ಲಿಕ್ ನೋಟರಿಯಿಂದ ಧೃಢೀಕರಿಸಿದ ವೈಯಕ್ತಿಕ ಘೋಷಣಾ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಅರ್ಜಿಯೊಂದಿಗೆ ಲಗತ್ತಿಸುವುದು)

4. ಅರ್ಜಿ ಸಲ್ಲಿಸುವವರು ಅಂಗೀಕೃತ ವಿಶ್ವ ವಿದ್ಯಾಲಯದಿಂದ ಪದವಿಧರರಾಗಿರತಕ್ಕದ್ದು

5. ತಪಾಸಣೆ, ಕ್ಷೇತ್ರ ಭೇಟಿ, ಹಾಗೂ ವೀಕ್ಷಣೆ ಕೆಲಸಗಳಿಗೆ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಪ್ರವಾಸ ಕೈಗೊಳ್ಳಲು ದೈಹಿಕವಾಗಿ ಸಮರ್ಥರಾಗಿರಬೇಕು.(ವೈದ್ಯಕೀಯ ಪ್ರಮಾಣ ಪತ್ರ ಲಗತ್ತಿಸುವುದು)

6. ಅರ್ಜಿ ಸಲ್ಲಿಸಲು ನಿಗಧಿಪಡಿಸಿರುವ ಕೊನೆಯ ದಿನಾಂಕಕ್ಕೆ ಗರಿಷ್ಠ ವಯಸ್ಸು 66 ವರ್ಷಗಳನ್ನು ಮೀರಿರಬಾರದು.

7. ನೇಮಕಾತಿಯು ಮೊದಲಿಗೆ 2 ವರ್ಷಗಳ ಅವಧಿಯದಾಗಿರುತ್ತದೆ. ಆದರೆ ಕಾರ್ಯನಿರ್ವಹಣೆಯು ಅತೃಪ್ತಿಕರವಾಗಿ ಕಂಡು ಬಂದಲ್ಲಿ ಅವಧಿಗೆ ಮುನ್ನವೇ ಹುದ್ದೆಯಿಂದ ಬಿಡುಗಡೆ ಮಾಡಲಾಗುವುದು.

8. ಕೇಂದ್ರ/ರಾಜ್ಯ ಸರ್ಕಾರವು ಹೊರಡಿಸುವ ಆದೇಶಗಳ ಅನುಸಾರ ಸಂಭಾವನೆ, ಸಿಟ್ಟಿಂಗ್ ಫೀಜು ನೀಡಲಾಗುವುದು. ಪ್ರಸ್ತುತ ಮಾಸಿಕ ರೂ.10000/- ಗೌರವಧನ ಹಾಗೂ ಪ್ರತಿ ಸಿಟ್ಟಿಂಗ್‌ಗೆ ರೂ.2250/- ದಂತೆ ಗರಿಷ್ಠ ರೂ.45000/- ಮಿತಿಗೊಳಪಟ್ಟು ಸಿಟ್ಟಿಂಗ್ ಫೀಜು ನೀಡಲಾಗುವುದು.

9.ಸದರಿ ಹುದ್ದೆಯು ಅರೆಕಾಲಿಕ ಹುದ್ದೆಯಾಗಿರುತ್ತದೆ.

RDPR Karnataka Ombudsman ಮುಖ್ಯ ಮಾಹಿತಿ

  • ಪ್ರಕಟಣೆ ದಿನಾಂಕ: 25.03.2026
  • ಇಲಾಖೆ: ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ (RDPR)
  • ಸ್ಥಳ: ಬೆಂಗಳೂರು
  • ಹುದ್ದೆ: Ombudsman
  • ಅರ್ಜಿ ಸಲ್ಲಿಕೆ: ಆಫ್‌ಲೈನ್

ವಯೋಮಿತಿ

  • ಗರಿಷ್ಠ ವಯಸ್ಸು: 66 ವರ್ಷ

ವೇತನ

  • ಮಾಸಿಕ ವೇತನ: ₹10,000 ರಿಂದ ₹45,000 (ಪ್ರಯಾಣ ಭತ್ಯೆ ಸೇರಿದಂತೆ)

RDPR Karnataka Ombudsman ಅರ್ಜಿ ಸಲ್ಲಿಸುವ ವಿಧಾನ

ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ನಿಂದ ಅರ್ಜಿ ಫಾರ್ಮ್ ಡೌನ್‌ಲೋಡ್ ಮಾಡಬೇಕು:

Official Website: www.rdpr.karnataka.gov.in

Official Notification and application form pdf: Click Here

ಅರ್ಜಿ ಭರ್ತಿ ಮಾಡಿ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು:

ಕಾರ್ಯಾಲಯ:
ಆಯುಕ್ತರು ಗ್ರಾಮೀಣಾಭಿವೃದ್ಧಿ,
ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ,
5ನೇ ಮಹಡಿ, ಪ್ಲಾಟ್ ನಂ.1243, ಕೆ.ಎಸ್.ಐ.ಐ.ಡಿ.ಸಿ.ಕಟ್ಟಡ, ಐ.ಟಿ. ಪಾರ್ಕ್, ಸೌತ್ ಬ್ಲಾಕ್,
ರಾಜಾಜಿನಗರ ಇಂಡಸ್ಟ್ರೀಯಲ್ ಎಸ್ಟೇಟ್,
ಬೆಂಗಳೂರು-560010.

ಕೊನೆಯ ದಿನಾಂಕ:

  • ಅರ್ಜಿ ಕೊನೆಯ ದಿನಾಂಕ: 24.04.2026
  •  ಸಮಯ: ಸಂಜೆ 5:30 ಒಳಗೆ

RDPR Karnataka Ombudsman ಅಗತ್ಯ ದಾಖಲೆಗಳು:

  • ಎಸ್ ಎಸ್ ಎಲ್ ಸಿ ಅಂಕ ಪಟ್ಟಿ
  • ವಾಸಸ್ಥಳದ ರುಜುವಾತು ಪ್ರಮಾಣ ಪತ್ರ
  • ಅಂಗೀಕೃತ ವಿಶ್ವ ವಿದ್ಯಾಲಯದಿಂದ ಪದವಿ ಪಡೆದ ಪ್ರಮಾಣ ಪತ್ರ
  • 10 ವರ್ಷಗಳ ಸೇವಾನುಭವ ಹೊಂದಿರುವ ಅನುಭವ ಪ್ರಮಾಣ ಪತ್ರ
  • ಕ್ರಿಮಿನಲ್ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದೀರಾ / ಆರೋಪ ಪಟ್ಟಿ ದಾಖಲಾಗಿದೆಯೇ?
  • ಇಲಾಖಾ ವಿಚಾರಣೆಯಲ್ಲಿ ದಂಡನೆಗೆ ಒಳಪಟ್ಟಿರುವಿರೇ?/ ಯಾವುದೇ ಇಲಾಖಾ ವಿಚಾರಣೆ ಬಾಕಿ ಇದೆಯೇ?
  • ಯಾವುದೇ ರಾಷ್ಟ್ರೀಯ / ರಾಜಕೀಯ | ಪಕ್ಷದ ಸದಸ್ಯರಾಗಿರಬಾರದು
  • ಯಾವುದೇ ನಿಷೇಧಿತ ಸಂಘ ಸಂಸ್ಥೆಯ ಸದಸ್ಯರಾಗಿರಬಾರದು.
  • ವೈದ್ಯಕೀಯ ಪ್ರಮಾಣ ಪತ್ರ ಲಗತ್ತಿಸುವುದು
  • ವೃತ್ತಿಪರ ಮಾಹಿತಿಯ ದಾಖಲೆಗಳ ವಿವರಗಳನ್ನು ಲಗತ್ತಿಸುವುದು
  • ಈ ಹಿಂದೆ ಕಾರ್ಯ ನಿರ್ವಹಿಸಿದ್ದ ಗರಿಷ್ಠ ಹುದ್ದೆ/ಸ್ಥಾನ

ಆಯ್ಕೆ ಪ್ರಕ್ರಿಯೆ

ಈ ನೇಮಕಾತಿ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳನ್ನು ಕೆಳಗಿನ ಹಂತಗಳ ಮೂಲಕ ಆಯ್ಕೆ ಮಾಡಬಹುದು:

  • ದಾಖಲೆ ಪರಿಶೀಲನೆ
  • ಸಂದರ್ಶನ (Interview)

ಅಭ್ಯರ್ಥಿಗಳ ಅನುಭವ ಮತ್ತು ಅರ್ಹತೆಗಳನ್ನು ಆಧರಿಸಿ ಆಯ್ಕೆ ಮಾಡಲಾಗುತ್ತದೆ.

SHG-Overview of SHG

ವಿಶೇಷ ಸೂಚನೆ:

ನಿಗಧಿ ಪಡಿಸಿದ ದಿನಾಂಕದ ನಂತರ ತಡವಾಗಿ ಸ್ವೀಕೃತವಾಗುವ ಅಥವಾ ಅಪೂರ್ಣ ಮಾಹಿತಿ ಹೊಂದಿರುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. (ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 080- 22342794 ಅನ್ನು ಸಂಪರ್ಕಿಸಬಹುದಾಗಿದೆ).

Leave a Comment